ಹೈದ್ರಾಬಾದ್ ಕರ್ನಾಟಕ ಡೆಸ್ಕ್
ರಾಹುಲ್ ಗಾಂಧಿ ಅವರ ಹೇಳಿಕೆ ತಿರುಚಿ ಹಂಚಿಕೆ- ಕ್ರಮಕ್ಕೆ ಮುಜೀಬುದ್ದೀನ್ ಆಗ್ರಹ
ಕ್ರಿಮಿನಲ್ ಸ್ವರೂಪದ ದೃಷ್ಟಿಯಿಂದ ಬಳಸಿಕೊಳ್ಳಲು ಉತ್ತೇಜನ ನೀಡುವ ಇಂತಹ ಎಡಿಟೆಡ್ ವಿಡಿಯೋವನ್ನು ಹಂಚಿಕೊಳ್ಳುತ್ತಿರುವುದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ. ಯುವಕರನ್ನು ಮತ್ತು ಜನತೆಯನ್ನು ದಾರಿ ತಪ್ಪಿಸುವ ಹುನ್ನಾರವಾಗಿದೆ ಎಂದು ಕಿಡಿಕಾರಿದ್ದಾರೆ.

ರಾಯಚೂರು- ಕೆರಳದಲ್ಲಿ ತಮ್ಮ ಸಂಸದರ ಕಛೇರಿ ಗುರಿಯಾಗಿಸಿಕೊಂಡು ಗಲಾಟೆ ಮಾಡಿದ್ದ ಎಸ್ ಎಫ್ ಐ ಕಾರ್ಯಕರ್ತರನ್ನು ಕ್ಷಮಿಸಬೇಕೆಂದು ಹೇಳಿ ಹೇಳಿಕೆ ನೀಡಿದ್ದ ನಮ್ಮ ನಾಯಕರದ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ತಿರುಚಿ ಉದಯಪುರ ಕೃತ್ಯದ ಆರೋಪಿಗಳನ್ನು ಕ್ಷಮಿಸಬೇಕೆಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಅವರು ಹೇಳಿದ್ದರೆಂದ ತಿರುಚಿದ ವಿಡಿಯೋವನ್ನು ನಗರದ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದ್ದು ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಬೇಕೆಂದು ನಗರದ ಕಾಂಗ್ರೆಸ್ ಮುಖಂಡ ಮುಜೀಬುದ್ದೀನ್ ಆಗ್ರಹಿಸಿದ್ದಾರೆ. ಹಲವು ವಾಟ್ ಆ್ಯಪ್ ಗ್ರೂಪ್ ಗಳಲ್ಲಿ ಈ ರೀತಿಯ ನಕಲಿ ಮತ್ತು ಎಡಿಟೆಡ್ ವಿಡಿಯೋ ಹಂಚಿಕೊಂಡು ಕಾಂಗ್ರೆಸ್ ನಾಯಕರಿಗೆ ಮತ್ತು ಪಕ್ಷಕ್ಕೆ ಕೆಟ್ಟ ಹೆಸರು ತರಬೇಕೆಂಬ ಉದ್ದೇಶ ಇದರಲ್ಲಿದೆ. ಕ್ರಿಮಿನಲ್ ಸ್ವರೂಪದ ದೃಷ್ಟಿಯಿಂದ ಬಳಸಿಕೊಳ್ಳಲು ಉತ್ತೇಜನ ನೀಡುವ ಇಂತಹ ಎಡಿಟೆಡ್ ವಿಡಿಯೋವನ್ನು ಹಂಚಿಕೊಳ್ಳುತ್ತಿರುವುದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ. ಯುವಕರನ್ನು ಮತ್ತು ಜನತೆಯನ್ನು ದಾರಿ ತಪ್ಪಿಸುವ ಹುನ್ನಾರವಾಗಿದೆ ಎಂದು ಕಿಡಿಕಾರಿದ್ದಾರೆ. ಉದ್ದೇಶಪೂರ್ವಕವಾಗಿ ಇಂತಹ ತಪ್ಪು ಸಂದೇಶಗಳನ್ನು ಹಂಚಿಕೊಳ್ಲಲಾಗುತ್ತಿದೆ. ರಾಹುಲ್ ಗಾಂಧಿ ಅವರ ಕಛೇರಿಗೆ ನುಗ್ಗಿ ದಾಂಧಲೆ ಮಾಡಿದ್ದ ಎಸ್ ಎಫ್ ಐ ಹುಡಗರನ್ನು ಕ್ಷಮಿಸಬೇಕೆಂದು ರಾಹುಲ್ ಗಾಂಧಿ ಅವರು ಮಾಧ್ಯಮಕ್ಕೆ ಮನವಿ ಮಾಡಿದ್ದರು. ಕೆರಳದ ವಯನಾಡ್ ಲ್ಲಿ ಈ ಘಟನೆ ನಡೆದಿತ್ತು. ಇದರ ಅಸಲಿ ವಿಡಿಯೋ ನೋಡಿದರೆ ತಿಳಿಯುತ್ತದೆ. ಇದೇ ಕ್ಷಮೆಯ ವಿಡಿಯೋವನ್ನು ಉದಯಪುರದ ಆರೋಪಿಗಳ ಪರವಾಗಿ ಬಳಕೆ ಮಾಡಿ ರಾಹುಲ್ ಅವರ ಹೇಳಿಕೆ ತಿರುಚಲಾಗಿದೆ. ಇಂತಹ ತಿರುಚಿದ ವಿಡಿಯೋ ಹಂಚಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದ್ದಾರೆ.