ಹೈದ್ರಾಬಾದ್ ಕರ್ನಾಟಕ ಡೆಸ್ಕ್
RRR ಬಾಕ್ಸ್ ಆಫೀಸ್: ವಿಶ್ವದಾಖಲೆ!
ಭಾರತ ಚಿತ್ರರಂಗದ ‘ಬಾಹುಬಲಿ’, ಎಸ್. ಎಸ್. ರಾಜಮೌಳಿ ನಿರ್ದೇಶನದ RRR ಸಿನಿಮಾ ಗಳಿಕೆಯಲ್ಲಿ ದಾಖಲೆ ಬರೆದಿದೆ. ತೆಲುಗಿನ ಹೆಸರಾಂತ ಸ್ಟಾರ್ ನಟರುಗಳಾದಂತ ಜೂನಿಯರ್ ಎನ್ಟಿಆರ್ ಹಾಗು ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಚಿತ್ರ RRR ಮಾರ್ಚ್ 25ರಿಂದ ಬೆಳ್ಳಿ ತೆರೆಗೆ ಬಂದಿತ್ತು. ಪ್ರಪಂಚದಾದ್ಯಂತ ಪಂಚಭಾಷೆಗಳಲ್ಲಿ, ವಿವಿಧ ಪ್ರದೇಶಗಳಲ್ಲಿ ಬಿಡುಗಡೆಯಗಿರೋ ಈ ‘ದೃಶ್ಯಕಾವ್ಯ’ವನ್ನು ಕಣ್ತುಂಬಿಕೊಳ್ಳಲು ಎಲ್ಲೆಡೆಯಿಂದ ಪ್ರೇಕ್ಷಕರು ಹರಿದುಬರುತ್ತಿದ್ದಾರೆ. ಎಲ್ಲೆಲ್ಲೂ ಹೌಸ್ ಫುಲ್ ಆಗಿರುವ ಈ ಚಿತ್ರದ ಕಲೆಕ್ಷನ್ ದಾಖಲೆಗಳನ್ನ ಬರೆಯುವುದು ಅಚ್ಚರಿಯ ವಿಷಯವೇನಲ್ಲ. ಪ್ರಪಂಚದಾದ್ಯಂತ ಅಂದಾಜು 257 ಕೋಟಿಗಳನ್ನು ಮೊದಲ ದಿನವೇ ಗಳಿಸಿರುವ RRR, ಈ ಹಿಂದೆ ಮೊದಲ ದಿನ ಸುಮಾರು 220 ಕೋಟಿ ಗಳಿಸಿ ದಾಖಲೆ ಸೃಷ್ಟಿಸಿದ್ದ ‘ಬಾಹುಬಲಿ 2’ ಚಿತ್ರವನ್ನ ಹಿಂದಿಕ್ಕಿ, ಮೊದಲ ದಿನದಲ್ಲಿ ಅತಿಹೆಚ್ಚು ಕಲೆಕ್ಷನ್ ಪಡೆದ ಭಾರತದ ಸಿನಿಮಾಗಳ ಸಾಲಿನಲ್ಲಿ ಪ್ರಥಮ ಸ್ಥಾನಕ್ಕೇರಿದೆ.
