
ಹೈದ್ರಾಬಾದ್ ಕರ್ನಾಟಕ ಡೆಸ್ಕ್
ಕಿಚ್ಚ ಸುದೀಪ್ ರನ್ನು ಹಾಡಿ ಹೊಗಳಿದ ರಾಜ ಮೌಳಿ

ಹೈದರಾಬಾದ್: ಬಾಹು ಬಲಿ ಚಿತ್ರದ ನಿರ್ದೇಶಕ ರಾಜ ಮೌಳಿ ನಟ ಕಿಚ್ಚ ಸುದೀಪ್ ಅವರನ್ನು ಹಾಡಿ ಹೊಗಳಿದ್ದಾರೆ. ವಿಕ್ರಾಂತ್ ರೋಣದಲ್ಲಿ ಸುದೀಪ್ ಅಭಿನಯ ನೋಡಿದ ಬಳಿಕ ರಾಜ ಮೌಳಿ ಸುದೀಪ್ ಅವರನ್ನು ಹಾಡಿ ಹೊಗಳಿದ್ದಾರೆ. ಸುದೀಪ್ ಅಭಿನಯದ ವಿಕ್ರಾಂತ್ ರೋಣ ಇಂದು ತೆರೆ ಕಾಣುತ್ತಿದೆ.
ವಿಕ್ರಾಂತ್ ರೋಣ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಚಿತ್ರದ ಪ್ರಚಾರ ಸಂಬಂಧ ನಟ ಕಿಚ್ಚ ಸುದೀಪ್ ದೆಹಲಿ, ಮುಂಬೈ , ಹೈದರಾಬಾದ್ ಸೇರಿದಂತೆ ಹಲವು ನಗರಗಳಿಗೆ ಭೇಟಿ ನೀಡಿದ್ದರು.
ನಟಿ ಜಾಕ್ವೆಲಿನ್ ಫರ್ನಾಂಡಿಸ್ ಈ ಚಿತ್ರದಲ್ಲಿ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹಾಡು ಈಗಾಗಲೇ ವೈರಲ್ ಆಗಿದೆ