• ಹೈದ್ರಾಬಾದ್ ಕರ್ನಾಟಕ ಡೆಸ್ಕ್

ಕುಡಿಯುವ ನೀರಿನ ಶುದ್ಧಿಕರಣ ಘಟಕಕ್ಕೆ ಭೇಟಿ ನೀಡಿದ ಶಾಸಕ ಶಿವರಾಜ್ ಪಾಟೀಲ್ರಾಯಚೂರು: ಕುಡಿಯುವ ನೀರಿನ ಶುದ್ಧಿಕರಣ ಘಟಕದ ರಿಪೇರಿ ಕಾರ್ಯ ನಡೆದು ಇಮದಿಗೆ ಐದು ದಿನಗಳಾಗುತ್ತಿದ್ದು, ಇದೀಗ ನಗರದ ಜನರಿಗೆ ಕುಡಿಯಲು ಯೋಗ್ಯವಾದ ನಿರು ಸರಬರಾಜಾಗುತ್ತಿದೆ ಎಂದು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದರು.


ಅವರಿಂದು ನಗರದ ಹೊರ ವಲಯದ ರಾಂಪೂರು ಜಲಾಶಯದ ಕುಡಿಯುವ ನೀರಿನ ಶುದ್ಧಿಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿರುವ ಶುದ್ಧಿಕರಿಸಿದ ಹಾಗೂ ನಗರಕ್ಕೆ ಸರಬರಾಜು ಮಾಡಲಾಗುವ ನೀರನ್ನು ಕುಡಿದು, ನಂತರ ಮಾದ್ಯಮಗಳೊಂದಿಗೆ ಮಾತನಾಡಿ, 5-6 ದಿನಗಳಿಂದ ಕುಡಿಯುವ ನೀರಿನ ಶುದ್ಧಿಕರಣ ಘಟಕ ರಿಪೇರಿಯಾಗುತ್ತಿದ್ದು, ಇದರಿಂದ ಇದೀಗ ನಗರದ ಸಾರ್ವಜನಿಕರಿಗೆ ಕುಡಿಯಲು ಯೋಗ್ಯವಾದ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.


ನಗರದ ಸಾರ್ವಜನಿಕರಿಗೆ ಪೂರೈಸುವ ನೀರನ್ನು ಜಲಾಶಯ ದಿಂದ ಶುದ್ಧಿಕರಣ ಘಟಕಕ್ಕೆ, ಶುದ್ಧಿಕರಣ ಘಟಕದಿಂದ ಓಎಚ್‌ಟಿ ಟ್ಯಾಂಕ್‌ಗಳಿಗೆ ಹಾಗೂ ಟ್ಯಾಂಕ್‌ಗಳಿಂದ ಸಾರ್ವಜನಿಕರ ನಲ್ಲಿಗಳಲ್ಲಿ ಬರುವ ನೀರನ್ನು ಮೂರು ಹಂತದಲ್ಲಿ ಪರೀಕ್ಷೆ ಮಾಡಲಾಗುತ್ತಿದ್ದು, ಜೊತೆಗೆ ಬಡಾವಣೆಗಳಲ್ಲಿರುವ ಓಎಚ್‌ಟಿ ಟ್ಯಾಂಕ್‌ಗಳ ಸ್ವಚ್ಛತೆಗೆ ಬೆಳಗಾವಿಯ ತಂಡವನ್ನು ಕರೆಸಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಲು ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಜನರಿಗೆ ಪೂರೂಕೆಯಾಗುವ ನೀರನ್ನು ಕುಡಿದು ಪರಿಕ್ಷಿಸಲಾಗಿದೆ ನೀರು ಶುದ್ಧವಾಗಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ, ನಗರಸಭೆ ಸದಸ್ಯರಾದ ಶಶಿರಾಜ್, ಬಿಜೆಪಿ ಮುಖಂಡರಾದ ಸನ್ನಿ, ಹರೀಶ ನಾಡಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

59 views0 comments

Recent Posts

See All

ಬೆಂಗಳೂರು: ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರ ನಾಮನಿರ್ದೇಶಿತ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ಸು ಪಡೆದಿದೆ. ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು ಇರುವ ನಿಗಮ/ಮಂಡಳಿ/ಪ್ರಾಧಿಕಾರದ ಒಟ್ಟು 52 ಮಂದಿಯನ್ನು ಹಿಂಪಡೆದಿರುವುದಾಗಿ ಮುಖ್