top of page
  • Writer's pictureಹೈದ್ರಾಬಾದ್ ಕರ್ನಾಟಕ ಡೆಸ್ಕ್

ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳ ಸದುಪಯೋಗಕ್ಕೆ ಸಚಿವ ಶಂಕರ ಪಾಟೀಲ್ ಕರೆ

ಪ್ರತಿಯೊಬ್ಬರು ಓದುವ ಹವ್ಯಾಸ ಅಳವಡಿಸಿಕೊಳ್ಳಬೇಕು, ಜ್ಞಾನ ಯಾರಿಂದಲೂ ಕಸಿದುಕೊಳ್ಳದಕ್ಕೆ ಆಗುವುದಿಲ್ಲ. ಜೀವನದಲ್ಲಿ ಜ್ಞಾನ ಮುಖ್ಯ. ಜ್ಞಾನದಿಂದ ಜೀವನದಲ್ಲಿ ಮುಂದೆ ಬರಲು ಸಾಧ್ಯ,

ಲಿಂಗಸೂಗೂರು.13- ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ರೈತರಿಗಾಗಿ ಆನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ದೇಶದ ಪ್ರಧಾನ ಮಂತ್ರಿಯವರು ದೇಶದ ಬಗ್ಗೆ ಅಪಾರ ಕಾಳಜಿವಹಿಸುವವರಾಗಿದ್ದಾರೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಬ.ಪಾಟೀಲ್ ಮುನೇನಕೊಪ್ಪ ಅವರು ಹೇಳಿದರು.


ಅವರು ಸೋಮವಾರ ದಂದು ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದ ತಾಲೂಕು ಪಂಚಾಯತ್ ಆವರಣದಲ್ಲಿ ನೂತನ ತಾ.ಪಂ ಕಟ್ಟಡ, ಹೈಟೈಕ್ ಗ್ರಂಥಾಲಯ, ರೈತ ಸಂಪರ್ಕ ಕೇಂದ್ರವನ್ನು ಉದ್ಘಾಟಿಸಿ, ಮಾತನಾಡಿದರು.


ಪ್ರಧಾನ ಮಂತ್ರಿ ಮೋದಿ ಅವರು ರೈತರ ಪರವಾಗಿ ಇದ್ದಾರೆ. ರೈತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನಮ್ಮ ದೇಶದ ಪ್ರಧಾನ ಮಂತ್ರಿಯವರು ಜಗತ್ತಿನ ಬಗ್ಗೆ ಯೋಚನೆ ಮಾಡುವವರಾಗಿದ್ದಾರೆ ಎಂದರು.


ಲಿಂಗಸುಗೂರು ಕ್ಷೇತ್ರದ ಶಾಸಕ ಡಿ,ಎಸ್ ಹೂಲಗೇರಿ ಅಭಿವೃದ್ದಿ ಪರವಾಗಿದ್ದಾರೆ. ಯಾವುದೇ ಸರ್ಕಾರ ಇದ್ದರೂ ಸಹ ಅನುದಾನ ತಂದು ತಮ್ಮ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಕಾಳಜಿವಹಿಸುತ್ತಿದ್ದು, ಶಾಸಕರು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದ ವಿವಿಧ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ ಹೇಳಿದರು.


ಭಾರತ ದೇಶವು ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು, ಪ್ರತಿಯೊಬ್ಬರು ಓದುವ ಹವ್ಯಾಸ ಅಳವಡಿಸಿಕೊಳ್ಳಬೇಕು, ಜ್ಞಾನ ಯಾರಿಂದಲೂ ಕಸಿದುಕೊಳ್ಳದಕ್ಕೆ ಆಗುವುದಿಲ್ಲ. ಜೀವನದಲ್ಲಿ ಜ್ಞಾನ ಮುಖ್ಯ ಜ್ಞಾನದಿಂದ ಜೀವನದಲ್ಲಿ ಮುಂದೆ ಬರಲು ಸಾಧ್ಯ, ಈಗಿನ ಕಾಲದಲ್ಲಿ ವಿದ್ಯಾವಂತ ಯುವಕರು ಹೆಚ್ಚಿನ ರೀತಿಯಲ್ಲಿ ಉಪಯೋಗ ಪಡೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾಗಬೇಕೆಂದರು.


ಸಂದರ್ಭದಲ್ಲಿ ಲೋಕಸಭಾ ಸದಸ್ಯ ರಾಜಾ ಅಮರೇಶ್ವರ ನಾಯಕ, ಶಾಸಕ ಡಿ,ಎಸ್ ಹೂಲಗೇರಿ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್, ನಗರಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಡಾ,ಶಿವಬಸಪ್ಪ, ಪುರಸಭೆ ಅಧ್ಯಕ್ಷೆ ಸುನೀತಾ ಕೆಂಭಾವಿ, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಖಿಲ್,ಬಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ನೂರ ಜಹಾನ್ ಖಾನಂ, ಲಿಂಗಸೂಗೂರು ಸಹಾಯಕ ಆಯುಕ್ತ ರಾಹುಲ್ ಸಂಕನೂರು, ತಹಶೀಲ್ದಾರ್ ಬಲರಾಮ ಕಟ್ಟಿಮನಿ, ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ, ಜಿಲ್ಲಾ ಪಂಚಾಯತ್ ಎಇಇ ಶಿವುಕುಮಾರ ಸೇರಿ ಅಧಿಕಾರಿಗಳು ಇದ್ದರು.

193 views0 comments

Recent Posts

See All

ಬೆಂಗಳೂರು: ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರ ನಾಮನಿರ್ದೇಶಿತ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ಸು ಪಡೆದಿದೆ. ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು ಇರುವ ನಿಗಮ/ಮಂಡಳಿ/ಪ್ರಾಧಿಕಾರದ ಒಟ್ಟು 52 ಮಂದಿಯನ್ನು ಹಿಂಪಡೆದಿರುವುದಾಗಿ ಮುಖ್

bottom of page