ಹೈದ್ರಾಬಾದ್ ಕರ್ನಾಟಕ ಡೆಸ್ಕ್
ಖಾಲಿಯಾಗುತ್ತಿದೆ ಜೆಡಿಎಸ್ ಬುಟ್ಟಿ; ಬೆಳೆಯುತ್ತಿದೆ ಪಕ್ಷ ಬಿಡುವವರ ಪಟ್ಟಿ
ಜೆಡಿಎಸ್ ಪಕ್ಷದ ATM ಗೆ ಮಾತ್ರ ಕಛೇರಿಗೆ ಬರುವ ನಾಯರೊಬ್ಬರಿದ್ದಾರೆ. ಆಗಾಗ ಬಂದು ಎಟಿಎಮ್ ಕಾರ್ಡ ಬಳಿಸಿ ಡ್ರಾ ಮಾಡಿ ಹೋದವರು, ಕಛೇರಿಗೆ ಬರುವುದು ಮತ್ತೆ ಎಟಿಎಂ ಬಳಸಲು ಎಂದು ಆ ಪಕ್ಷದ ನಾಯಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ರಾಯಚೂರು- ನಗರ ವಿಧಾನ ಸಭಾ ಕ್ಷೇತ್ರದ ಚುನಾವಣೆ ಪೂರ್ವ ನಗರ ಶಾಸಕರ ತಂತ್ರಗಾರಿಕೆ ಫಲಕೊಡುತ್ತಿದೆ. ಹರಿಜನವಾಡದ ಮುಖಂಡ ಎಂದು ಕರೆಯುವ ಜೆಡಿಎಸ್ ನ ಯಲ್ಲಪ್ಪ ಬಿಜೆಪಿ ಪಾಳೆಯಕ್ಕೆ ಸೆಳೆಯಲಾಗಿದೆ. ಈ ಮೂಲಕ ಜೆಡಿಎಸ್ ನ ಜಿಲ್ಲಾಧ್ಯಕ್ಷರ ಹಲವು ಅಸಂಬದ್ಧ, ಅಪ್ರೌಢ ಹೇಳಿಕೆಗೆ ಪರೋಕ್ಷವಾಗಿ ಚಾಟಿ ಬೀಸಿ ಜೆಡಿಎಸ್ ಪಕ್ಷ ಲೆಕ್ಕಕ್ಕಿಲ್ಲ ಎನ್ನುವಂತೆ ಮಾಡಿದ್ದಾರೆ. ಇದು ಹಾಲಿ ಶಾಸಕರು ವಿರೋಧಿಗಳಿಗೆ ನೀಡಿದ ಎಚ್ಚರಿಕೆ ಎಂದು ಶಿವರಾಜ ಪಾಟೀಲ್ ಬೆಂಬಲಿಗರು ವಿಶ್ಲೇಷಣೆ ಮಾಡುತ್ತಿದ್ದಾರೆ.
ಮತ್ತೊಂದಡೆ ಜೆಡಿಎಸ್ನ ಹಲವು ಪದಾಧಿಕಾರಿಗಳು ಕಾಂಗ್ರೆಸ್ ಕಡೆ ಮುಖಮಾಡಲಿದ್ದಾರೆ ಎಂಬ ಸುದ್ದಿ ಇದೆ. ಜಿಲ್ಲೆಯಲ್ಲಿ ಜೆಡಿಎಸ್ನ ಪ್ರಮುಖರು ಅತ್ಯಂತ ಹಗುರವಾದ ಹೇಳಿಕೆಗಳನ್ನು ನೀಡುವುದು ಒಂದು ಕಡೆಯಾದರೆ, ಜೆಡಿಎಸ್ ಪಕ್ಷದ ATM ಗೆ ಮಾತ್ರ ಕಛೇರಿಗೆ ಬರುವ ನಾಯರೊಬ್ಬರಿದ್ದಾರೆ. ಆಗಾಗ ಬಂದು ಎಟಿಎಮ್ ಕಾರ್ಡ ಬಳಿಸಿ ಡ್ರಾ ಮಾಡಿ ಹೋದವರು, ಕಛೇರಿಗೆ ಬರುವುದು ಮತ್ತೆ ಎಟಿಎಂ ಬಳಸಲು ಎಂದು ಆ ಪಕ್ಷದ ನಾಯಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಕೋರ್ ಕಮೀಟಿಯ ಸದಸ್ಯರುಗಳಾದ ಇಬ್ಬರು ಶಾಸಕರುಗಳು ಪಕ್ಷ ಬಲವರ್ಧನೆಗೆ ಮುಂದಾಗುತ್ತಿಲ್ಲ ಎಂಬ ಅಸಮಾಧಾನವು ಕಾರ್ಯಕರ್ತರಲ್ಲಿ ಮನೆ ಮಾಡಿದೆ. ಹಾಗಾಗಿ ಜೆಡಿಎಸ್ ಪಕ್ಷ ಯುವ ನಾಯಕನನ್ನು ಹುಡುಕಿ ಜಿಲ್ಲಾಧ್ಯಕ್ಷ ಮಾಡುವ ತಂತ್ರಕ್ಕೆ ಮೊರೆಹೋಗಿ ಸದೃಢವಾದ ತಂಡ ಕಟ್ಟುವ ಅನಿವಾರ್ಯತೆ ಜೆಡಿಎಸ್ ಗೆ ಒದಗಿಬಂದಿದೆ. ಮಹಾಂತೇಶ್ ಪಾಟೀಲ್ ಅತ್ತನೂರು ರಂತಹ ಹಿರಿಯರನ್ನು ಮೂಲೆಗುಂಪು ಮಾಡಿದ ಪರಿಣಾಮ ಜಿಲ್ಲಾ ಘಟಕದ ಪರಿಸ್ಥಿತಿ ಹೇಳತೀರದಾಗಿದೆ. ನಗರ ಕ್ಷೇತ್ರದಲ್ಲಿ ಜೆಡಿಎಸ್ ನ ಕಟ್ಟಾಬೆಂಬಲಿಗರ ಸ್ಥಿತಿ ಡೋಲಾಯಮಾನವಾಗಿದೆ. ಸರಿಯಾದ ಮುಂದಾಲೋಚನೆ ಮತ್ತು ನಾಯಕತ್ವ ಇಲ್ಲದ ಕಾರಣ ಅನ್ಯಪಕ್ಷಗಳಿಗೆ ಕೆಲವರು ಹಂಚಿ ಹೋಗಿದ್ದಾರೆ ಎಂದು ಜೆಡಿಎಸ್ ನ ಕಾರ್ಯಕರ್ತ ಶಂಕರನಾಗ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರ ಶಾಸಕ ಮತ್ತು ಮುಖಂಡ ರವೀಂದ್ರ ಜಲ್ದಾರ್ ನೇತೃತ್ವದಲ್ಲಿ ತಂತ್ರಗಾರಿಕೆ ರೂಪಿಸಲಾಗುತ್ತಿದೆ. ಈ ಪರಿಣಾಮ ಶಾಸಕರ ಬೆಂಬಲಿಗರಲ್ಲಿ ಉತ್ಸಾಹ ಕಂಡುಬರುತ್ತಿದೆ. ವಿವಿಧ ಪಕ್ಷದಲ್ಲಿ ಅಸಮಧಾನ ಹೊಂದಿರುವ ನಾಯಕರನ್ನು ಸೆಳೆಯುವಲ್ಲಿ ನಗರ ಶಾಸಕ ಶಿವರಾಜ ಪಾಟೀಲ್ ಯಶಸ್ವಿಯಾಗಿದ್ದಾರೆ.ಇದರ ಭಾಗವಾಗಿ ಜೆಡಿಎಸ್ ಯಲ್ಲಪ್ಪ, ಸುಭಾಶ್ ಮತ್ತು ಕಾಂಗ್ರೆಸ್ ನ ಎ.ವಸಂತಕುಮಾರ್ ಆಪ್ತ ಈಶಪ್ಪ ಸೇರಿದಂತೆ ಅನೇಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈಶಪ್ಪ ಬಿಜೆಪಿ ಸೇರಿದ್ದು ಕಾಂಗ್ರೆಸ್ ಗೆ ಅನುಕೂಲತೆ ಇದೆ ಎಂಬ ಮಾತುಗಳು ಸಹ ಕೇಳಿಬಂದಿವೆ. ಆದರೆ, ನಗರ ಶಾಸಕರ ನಡೆ ಜೆಡಿಎಸ್ ಪಕ್ಷವನ್ನು ದೊಡ್ಡ ಹೊಡೆತ ನೀಡುತ್ತಿದೆ. ಶಾಸಕರ ಬೆಂಬಲಿಗರ ಪ್ರಮಾಣ ಏರುಗತಿ ಕಂಡಿದೆ. ಇದು ಮತಗಳಾಗಿ ಪರಿವರ್ತನೆಯಾಗಲಿದೆಯೇ ಎನ್ನುವುದು ಯಕ್ಷ ಪ್ರಶ್ನೆ.