top of page
  • Writer's pictureಹೈದ್ರಾಬಾದ್ ಕರ್ನಾಟಕ ಡೆಸ್ಕ್

ವಿನೂತನ ಕಾರ್ಯಕ್ರಮ: ಶೈಕ್ಷಣಿಕ ಗುಮಟ್ಟಕ್ಕೆ ಕೆ.ಕರಿಯಪ್ಪ ನಡೆ- ಬಾರಿ ಪ್ರಶಂಸೆ



ವಿದ್ಯಾರ್ಥಿಗಳಿಗೆ ಸನ್ಮಾನದ ಪಾರಿತೋಷಕ ನೀಡಿ‌ ಉನ್ನತ ಪದವಿಯಲ್ಲಿ ಮತ್ತಷ್ಟು ಸಾಧನೆಗೈಯಲಿ ಎಂಬ ಆಶಯದ ವಿನೂತನ ಕಾರ್ಯಕ್ರಮ ಕೆಪಿಸಿಸಿನ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ಅವರು ನಡೆಸುತ್ತಿರುವುದಕ್ಕೆ ಎಲ್ಲೆಡೆ ಶ್ಲಾಘಿನೆ ವ್ಯಕ್ತವಾಗಿದೆ

ರಾಯಚೂರು- ಪ್ರತಿಭೆ ತಮ್ಮದು ಪುರಸ್ಕಾರ ನಮ್ಮದು, ನಮ್ಮ ನಡೆ ಸಮಾಜದ ಕಡೆ ಧ್ಯೇಯದ ಮೂಲಕ ಎಸ್ ಎಸ್ ಎಲ್ ಸಿ ಯಿಂದ ಪದವಿ ತನಕ ಅತಿ ಹೆಚ್ಚಿನ ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನದ ಪಾರಿತೋಷಕ ನೀಡಿ‌ ಉನ್ನತ ಪದವಿಯಲ್ಲಿ ಮತ್ತಷ್ಟು ಸಾಧನೆಗೈಯಲಿ ಎಂಬ ಆಶಯದ ವಿನೂತನ ಕಾರ್ಯಕ್ರಮ ಕೆಪಿಸಿಸಿನ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ಅವರು ನಡೆಸುತ್ತಿರುವುದಕ್ಕೆ ಎಲ್ಲೆಡೆ ಶ್ಲಾಘಿನೆ ವ್ಯಕ್ತವಾಗಿದೆ. ಕೆಪಿಸಿಸಿ ಮಾಜಿ ರಾಜ್ಯ ಕಾರ್ಯದರ್ಶಿ ಕೆ ಕರಿಯಪ್ಪರವರ ತಂದೆಯ ಸ್ಮರಣಾರ್ಥವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ‌ನಡೆಸುತ್ತಲೇ ಬಂದಿದ್ದಾರೆ. ಆದರೆ, ಈ ಬಾರಿ ಮಾತ್ರ ಸಾಧಕರ ಮನೆ ಮನೆಗೆ ತೆರಳಿ ಪ್ರತಿಭಾವಂತರಿಗೆ ಪಾರಿತೋಷಕ ನೀಡಲಾಗುತ್ತಿದೆ. ಇಂದಿನಿಂದ ಸುಮಾರು ಹತ್ತು ದಿನಗಳ ಕಾಲ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕೆ.ಕರಿಯಪ್ಪ ಅಭಿಮಾನಿ ಬಳಗದ ತಾಲೂಕ ಸಂಚಾಲಕರಾದ ಬೀರಪ್ಪ ಶಂಬೊಜಿ,ಬಸವರಾಜ, ಆಮರೇಶಪ್ಪ ಮೈಲಾರ ಮುಂತಾದವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ.



ಸಿಂಧನೂರು ತಾಲೂಕಿನ 124 ಗ್ರಾಮಗಳ ಶಾಲಾ,ಕಾಲೇಜು ಹಂತದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತಿದೆ. ಸಾಧಕರ ಮನೆಗೆ ತೆರಳಿ ವಿದ್ಯಾರ್ಥಿಗಳನ್ನು ಸನ್ಮಾನಿಸುವುದಲ್ಲದೆ ಪೋಷಕರಿಗೆ ಗೌರವ ಸಲ್ಲಿಸಲಾಗುತ್ತಿದೆ. ಈ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಹೆಚ್ಚಿನ ಒತ್ತು ನೀಡಲಿ ಎಂಬ ಉದ್ದೇಶ ಅಡಗಿದೆ. ಶಾಲೆಗೆ ಕಳುಹಿಸುವ ಪೋಷಕರಿಗೆ ಸನ್ಮಾನ ಗೌರವದಂತ ಕ್ರಿಯೆಗಳು ನಡೆಯಬೇಕು. ಆಗಾ ಮಾತ್ರ ಪೋಷಕರು ಜಾಣ್ಮೆಯ ವಿದ್ಯಾರ್ಥಿಗಳನ್ನು ಗುರುತಿಸಲು ಅನುಕೂಲವಾಗುತ್ತದೆ ಎಂಬ ಆಶೆಯ ಇದೆ. ಈ ರೀತಿಯ ಕಾರ್ಯಕ್ರಮಗಳ ರಾಜ್ಯದಲ್ಲಿ ಪ್ರಥಮವಾಗಿದೆ. ಮಕ್ಕಳ ಶೈಕ್ಷಣಿಕ ಗುಣಮಟ್ಟಕ್ಕೆ ದುಡಿಯಯುತ್ತಿರುವ ಕೆ.ಕರಿಯಪ್ಪ ಅವರ‌ ನಡೆಗೆ ಪ್ರಶಂಸೆ ವ್ಯಕ್ತವಾಗಿದೆ.



88 views0 comments

Recent Posts

See All

ಬೆಂಗಳೂರು: ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರ ನಾಮನಿರ್ದೇಶಿತ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ಸು ಪಡೆದಿದೆ. ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು ಇರುವ ನಿಗಮ/ಮಂಡಳಿ/ಪ್ರಾಧಿಕಾರದ ಒಟ್ಟು 52 ಮಂದಿಯನ್ನು ಹಿಂಪಡೆದಿರುವುದಾಗಿ ಮುಖ್

bottom of page