• ಹೈದ್ರಾಬಾದ್ ಕರ್ನಾಟಕ ಡೆಸ್ಕ್

ಕ್ರೇಜಿಸ್ಟಾರ್ ಪುತ್ರನಿಗೆ ಕಂಕಣ ಭಾಗ್ಯ

ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ಆಗಸ್ಟ್ 21ರಂದು ಹಸೆಮಣೆ ಏರುತ್ತಿದ್ದಾರೆ. ತಂದೆಯಂತೆಯೇ ಸಿನಿಮಾ ರಂಗದಲ್ಲೇ ಮುಂದುವರೆದಿರುವ ಮನೋರಂಜನ್, ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ನಿವಾಸಿ ವೈದ್ಯೆಯನ್ನು ವರಿಸಲಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ಸೈಲೆಂಟ್ ಆಗಿ ಮಗನ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದು ಮುಂದಿನ ತಿಂಗಳೇ ಮದುವೆ ನಡೆಯಲಿದೆ.

ಮೂಲಗಳ ಪ್ರಕಾರ, ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ಆಗಸ್ಟ್ 21ರಂದು ಹಸೆಮಣೆ ಏರುತ್ತಿದ್ದಾರೆ. ತಂದೆಯಂತೆಯೇ ಸಿನಿಮಾ ರಂಗದಲ್ಲೇ ಮುಂದುವರೆದಿರುವ ಮನೋರಂಜನ್, ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ನಿವಾಸಿ ವೈದ್ಯೆಯನ್ನು ವರಿಸಲಿದ್ದಾರೆ.

ಮನೋರಂಜನ್ 2017ರಲ್ಲಿ ಸಾಹೇಬಾ ಮೂಲಕ ಮೊದಲ ಬಾರಿಗೆ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ಬಳಿಕ ಬೃಹಸ್ಪತಿ, ಮುಗಿಲ್ ಪೇಟೆ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2022ರಲ್ಲಿ ಪ್ರಾರಂಭ ಸಿನಿಮಾ ಮೂಲಕ ಮನೋರಂಜನ್ ಅಭಿಮಾನಿಗಳ ಮುಂದೆ ಬಂದಿದ್ದರು. ಸಿನಿಮಾದಲ್ಲಿ ದೊಡ್ಡ ಮಟ್ಟದ ಬ್ರೇಕ್ ಪಡೆಯಲು ಪ್ರಯತ್ನಿಸುತ್ತಿದ್ದ ಮನೋರಂಜನ್ ಇದೀಗ ವೈಯಕ್ತಿಕ ಜೀವನದ ಕಡೆ ಗಮನಹರಿಸಿದ್ದಾರೆ. ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ಸದ್ಯ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೆ ವಿಕ್ರಮ್ ನಟನೆಯ ತ್ರಿವಿಕ್ರಮ ಸಿನಿಮಾ ರಿಲೀಸ್ ಆಗಿದೆ. ರವಿಚಂದ್ರನ್ 2019ರಲ್ಲಿ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದು ಈಗ ಮಗನ ಮದುವೆ ಸಿದ್ಧತೆ ನಡೆಸಿದ್ದಾರೆ

14 views0 comments