top of page
  • Writer's pictureಹೈದ್ರಾಬಾದ್ ಕರ್ನಾಟಕ ಡೆಸ್ಕ್

ಅಗ್ನಿಪಥ ಯೋಜನೆ ಹಿಂಪಡೆಯಬೇಕು- ಮುಜೀಬುದ್ದೀನ್

ಲಾಲ್‍ಬಹದ್ದೂರ್‌ ಶಾಸ್ತ್ರಿಯವರು ಹೇಳಿದ ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷವಾಕ್ಯದೊಂದಿಗೆ ದೇಶದ ರೈತರು ಮತ್ತು ದೇಶವನ್ನು ಕಾಯುವ ಸೈನಿಕರು ನಮ್ಮ ಎರಡು ಕಣ್ಣುಗಳಿದ್ದಂತೆ ಎಂದು ನಂಬಿದವರು ನಾವು. ಆದರೆ ಮೋದಿ ನೇತೃತ್ವದ ಸರ್ಕಾರ ವೀರ ಯೋಧರ ತ್ಯಾಗ ಬಲಿದಾನಕ್ಕೆ ಬೆಲೆ ಕೊಡುತ್ತಿಲ್ಲ ಎಂದು ಕಿಡಿಕಾರಿದರು.


ರಾಯಚೂರು- ಸರ್ಕಾರಕ್ಕೆ ಉಳಿತಾಯ ಆಗಲಿದೆ ಎಂಬ ಕಾರಣಕ್ಕೆ ಅಗ್ನಿಪಥ ಯೋಜನೆಯ ಜಾರಿಗೆ ತಂದಿದ್ದು ಸೈನಿಕರಿಗೆ ನೀಡುವ ಪಿಂಚಣಿ ಮತ್ತು ಇತರ ನಿವೃತ್ತಿ ಸೌಲಭ್ಯಗಳಿಗೆ ಆಗುವ ವೆಚ್ಚ ತಗ್ಗುತ್ತದೆ ಎಂಬ ಚಿಂತನೆ ಸರ್ಕಾರದಲ್ಲಿದ್ದು ಇದು ದೇಶದ ಭದ್ರತೆ‌ ಮತ್ತು ಯುವ ಸಮುದಾಯಕ್ಕೆ ಹಾನಿ ಉಂಟು ಮಾಡಲಿದ್ದು ಕೂಡಲೆ ಹಿಂಪಡೆಯಬೇಕೆಂದು ಎಂದು ಕಾಂಗ್ರೆಸ್ ‌ಮುಖಂಡ ಮುಜೀಬುದ್ದೀನ್ ಆಗ್ರಹಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಗ್ನಿಪಥ ಯೋಜನೆಯಿಂದಾಗಿ ದೇಶದ ಯುವಕರ ಬಾಳು ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದಂತಾಗಿದೆ. ಈ ಯೋಜನೆಯಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುವುದಿಲ್ಲ. ದೇಶಕ್ಕೆ ಮಾರಕವಾಗಿರುವ ಈ ಯೋಜನೆಯನ್ನು ಹಿಂಪಡೆದು ಸೈನ್ಯ ಸೇರುವ ಯುವಕರಿಗೆ ಭದ್ರತೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಲಾಲ್‍ಬಹದ್ದೂರ್‌ ಶಾಸ್ತ್ರಿಯವರು ಹೇಳಿದ ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷವಾಕ್ಯದೊಂದಿಗೆ ದೇಶದ ರೈತರು ಮತ್ತು ದೇಶವನ್ನು ಕಾಯುವ ಸೈನಿಕರು ನಮ್ಮ ಎರಡು ಕಣ್ಣುಗಳಿದ್ದಂತೆ ಎಂದು ನಂಬಿದವರು ನಾವು. ಆದರೆ ಮೋದಿ ನೇತೃತ್ವದ ಸರ್ಕಾರ ವೀರ ಯೋಧರ ತ್ಯಾಗ ಬಲಿದಾನಕ್ಕೆ ಬೆಲೆ ಕೊಡುತ್ತಿಲ್ಲ ಎಂದು ಕಿಡಿಕಾರಿದರು. ಅಗ್ನಿಪಥ ಯೋಜನೆಯನ್ನು ಹಿಂಪಡೆದು ಮೊದಲು ಜಾರಿಯಲ್ಲಿದ್ದ ಸೇನಾ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಬೇಕು ಆಗ್ರಹಿಸುತ್ತೇನೆ.

93 views0 comments

Recent Posts

See All

ಬೆಂಗಳೂರು: ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರ ನಾಮನಿರ್ದೇಶಿತ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ಸು ಪಡೆದಿದೆ. ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು ಇರುವ ನಿಗಮ/ಮಂಡಳಿ/ಪ್ರಾಧಿಕಾರದ ಒಟ್ಟು 52 ಮಂದಿಯನ್ನು ಹಿಂಪಡೆದಿರುವುದಾಗಿ ಮುಖ್

bottom of page