• ಹೈದ್ರಾಬಾದ್ ಕರ್ನಾಟಕ ಡೆಸ್ಕ್

ಹಾಲಿ ಶಾಸಕರಿಗೆ ತಲೆನೋವಾದ ರಾಮನಗೌಡ !

ರಾಯಚೂರು,ಮಾ.30- ರಾಯಚೂರು ನಗರ ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕ ಡಾ.ಶಿವರಾಜ ಪಾಟೀಲ್ ಗೆ ಜೆಡಿಎಸ್ ಮುಖಂಡ ರಾಮನಗೌಡ ಏಗನೂರು ತೀವ್ರ ತಲೆನೋವಾಗಿ ಪರಿಣಮಿಸಿದ್ದಾರೆ.

ಮೊದಲು ಜೆಡಿಎಸ್ ಪಕ್ಷದಿಂದ ಶಾಸಕರಾಗಿ 2018ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಹವಾದಲ್ಲಿ ಜಯಗಳಿಸಿ ಮತ್ತೊಮ್ಮೆ ಶಾಸಕರಾಗಿ ಅಧಿಕಾರ ನಡೆಸುತ್ತಿರುವ ಶಿವರಾಜ ಪಾಟೀಲ್ ರ ಎದುರು ಜನರ ಕೊರತೆಗಳನ್ನು ರಾಮನಗೌಡ ಏಗನೂರು ಅವರು ಒಂದೊಂದಾಗಿ ಎತ್ತಿ ಹಿಡಿಯುತ್ತಿರುವುದು ಹಾಲಿ ಶಾಸಕರಾಗಿ ನುಂಗಲಾರದ ತುತ್ತಾಗಿದೆ. ವಸತಿ ಯೋಜನೆ ಮನೆಗಳು, ಕೈಗಾರಿಕಾ ವಲಯದ ಕಾರ್ಮಿಕರಿಗಾಗಿ ಕಟ್ಟಲ್ಪಟ್ಟ ವಸತಿಗಳಲ್ಲಿನ ಭಾರಿ ಭ್ರಷ್ಟಾಚಾರ, ಜನರ ಎದುರಿಗೆ ಜೆಡಿಎಸ್ ಮುಖಂಡ ರಾಮನಗೌಡ ಏಗನೂರು ಸಾಕ್ಷ್ಯಾಧಾರ ಸಮೇತ ಪ್ರಸ್ತಾಪ ಮಾಡುತ್ತಿದ್ದಾರೆ.

ರಾಯಚೂರು ಜಿಲ್ಲೆಗೆ ಏಮ್ಸ್ ತರುವ ವಿಚಾರದಲ್ಲಿ ನಗರದ ಹಾಲಿ ಶಾಸಕರ ವೈಫಲ್ಯ, ವಿಮಾನ ನಿಲ್ದಾಣ ಸ್ಥಾಪನೆ ಕುರಿತಂತೆ ಸುಳ್ಳು ಪ್ರಚಾರ ಗಿಟ್ಟಿಸಿಕೊಂಡಿದ್ದು, 371(ಜೆ) ಕಲಂ ಅಡಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ನೀಡಬೇಕಾದ ಮೀಸಲಾತಿ ವಿರುದ್ಧದ ಇಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಯಾಗಿರುವ ನವೋದಯ ಶಿಕ್ಷಣ ಸಂಸ್ಥೆ ಕಲಬುರ್ಗಿ ಹೈಕೋರ್ಟ್ ಪೀಠದಲ್ಲಿ ದಾವೆ ಹಾಕಿ ಜಯಸಿದ್ದು. ಇದನ್ನು ತಡೆಯಲು ಕೈಗೊಳ್ಳಬೇಕಾಗಿದ್ದ ನ್ಯಾಯಯುತ ವಾದವನ್ನು ನಗರ ಶಾಸಕ ಶಿವರಾಜ ಪಾಟೀಲ್ ರು ಮಾಡದೇ ಸೋಲುಕಂಡಿದ್ದು. ಸದನದಲ್ಲಿ ಹಾಲಿ ಶಾಸಕರು ತೋರಿದ ಅಸಭ್ಯ ವರ್ತನೆ. ಹೋರಾಟಕ್ಕೆ ಜನರನ್ನು ಬಿಟ್ಟು ಪಲಾಯನ ಮಾಡಿದ್ದು. ಅಷ್ಟೇ ಅಲ್ಲದೆ ನಗರದ ಬಡಜನರ ಆಸ್ಪತ್ರೆಯಾಗಿರುವ ರಿಮ್ಸ್ ನ್ನು ಸುಸಜ್ಜಿತವಾಗಿಡಲು ವಿಫಲವಾಯಿರುವ ನಗರ ಶಾಸಕರ ನಡೆಯನ್ನು ಖಂಡಿಸಿದ್ದು ನಗರ ಜೆಡಿಎಸ್ ಮುಖಂಡ ರಾಮನಗೌಡ ಏಗನೂರು ಮಾತ್ರ.

ಕಳೆದ 10 ವರ್ಷಗಳಲ್ಲಿ ಒಂದು ವಿರೋಧ ಪಕ್ಷ ಇಲ್ಲದಂತೆ ಇದ್ದ ನಗರಕ್ಕೆ ಜೆಡಿಎಸ್ ಮುಖಂಡ ರಾಮನಗೌಡ ಏಗನೂರು ಬಂದಿದ್ದು ಶಾಸಕರಿಗೆ ತಲೆನೋವು ಆಗಿದೆ ಎಂಬ ಚರ್ಚೆಗಳು ನಡೆದಿವೆ. ವಿರೋಧ ಪಕ್ಷ ಸ್ಥಾನದಲ್ಲಿರದಿದ್ದರು ಶಾಸಕರ ಅಸ್ಪಷ್ಟತೆಯ ಬಗ್ಗೆ ಧ್ವನಿ ಎತ್ತಿ ಜನರಿಗೆ ತಿಳಿಸುವ ಕೆಲಸ ನಿರ್ವಹಣೆ ಮಾಡುತ್ತಿರುವ ರಾಮನಗೌಡರ ನಡೆ ನಗರದಲ್ಲಿ ಪ್ರಶಂಸೆಗೆ ಕಾರಣವಾಗಿದೆ. 2023ರ ಸಾರ್ವತ್ರಿಕ ವಿಧಾನಸಭಾ ಪೂರ್ವ ಇಂತಹ ಬೆಳೆವಣಿಗೆ ನಡೆಯುತ್ತಿರುವುದು ಶಾಸಕ ಬಳಗಕ್ಕೆ ಆತಂಕ ಉಂಟಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ನಗರಸಭೆಯ ಅಧ್ಯಕ್ಷ ಗಾದೆಗೆ ನಡೆಯುತ್ತಿರುವ ಚುನಾವಣೆಗೆ ಅಸಂವಿಧಾನಿಕ ನಡೆ ಅನುಸರಿಸುತ್ತಿರುವ ಶಾಸಕರನ್ನು ತೀವ್ರವಾಗಿ ರಾಮನಗೌಡ ಖಂಡಿಸಿ ನಗರದ ಅಧಿಕಾರ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂದು ಪ್ರಯತ್ನ ನಡೆಸುತ್ತಿರುವ ಶಿವರಾಜ್ ಪಾಟೀಲ್ ರು ಸ್ಥಳೀಯ ಸಂಸ್ಥೆಯನ್ನು ಭ್ರಷ್ಟಗೊಳಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. 10 ವರ್ಷದಲ್ಲಿ ಭರವಸೆಯನ್ನು ನೀಡಿದ್ದು ಬಿಟ್ಟರೆ ಶಾಸಕರು ಒಂದನ್ನು ಸಹ. ಈಡೇರಿಸಿಲ್ಲ. ನಗರಕ್ಕೆ 24 ಗಂಟೆ ನೀರು ಕೊಡುತ್ತೇನೆ ಎಂದು ಓಟು ಗಿಟ್ಟಿಸಿಕೊಂಡು ಈಗ ನೆಪ ಹೇಳಿ ಪಲಾಯನ ಮಾಡುತ್ತಿದ್ದಾರೆ. ನಗರದ ರಸ್ತೆಗಳ ಗುಣಮಟ್ಟದ ಕಾಮಗಾರಿ ಕಾಗದದ ಮೇಲೆ ಲೆಕ್ಕವಾಗಿದೆ ವಿನಃ ಗುಣಮಟ್ಟದ ಕಾಮಗಾರಿ ನಿರ್ವಹಣೆ ಮಾಡಿಲ್ಲ. ಇಲ್ಲಿ ಶಾಸಕರ 10ಜನ ಹಿಂಬಾಲಕರು ಗುತ್ತಿಗೆ ಪಡೆದು ಹಳ್ಳ ಹಿಡಿಸಿದ್ದಾರೆ ಎಂಬ ಆರೋಪ ನೇರವಾಗಿ ಮಾಡುತ್ತಿದ್ದಾರೆ. ಇದು ನಗರಶಾಸಕರಿಗೆ ತಲೆನೋವು ಆಗಿ ಪರಿಣಮಿಸಿದೆ. ಇದನ್ನು ನಗರ ಶಾಸಕ ಶಿವರಾಜ್ ಪಾಟೀಲ್ ಹೇಗೆ ನಿಭಾಯಿಸುತ್ತಾರೆ ಕಾದುನೋಡಬೇಕಾಗಿದೆ.

3 views0 comments

Recent Posts

See All

ಬೆಂಗಳೂರು: ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರ ನಾಮನಿರ್ದೇಶಿತ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ಸು ಪಡೆದಿದೆ. ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು ಇರುವ ನಿಗಮ/ಮಂಡಳಿ/ಪ್ರಾಧಿಕಾರದ ಒಟ್ಟು 52 ಮಂದಿಯನ್ನು ಹಿಂಪಡೆದಿರುವುದಾಗಿ ಮುಖ್