top of page
  • Writer's pictureಹೈದ್ರಾಬಾದ್ ಕರ್ನಾಟಕ ಡೆಸ್ಕ್

ಸಾವಿರ ಕೋಟಿ ಎಲ್ಲಿಟ್ಟದ್ದಾರೆ ಶಿವರಾಜ ಪಾಟೀಲ್- ರಾಮನಗೌಡ


ರಾಯಚೂರು- ನಗರ ಶಾಸಕ‌ ಡಾ.ಶಿವರಾಜ ಪಾಟೀಲ್ ರ ಈ ಬಾರಿಯ ಅಧಿಕಾರಾವಧಿಯ 1 ಸಾವಿರ ಕೋಟಿ ರೂಗಳ ಅನುದಾನದಲ್ಲಿ ಕೈಗೆತ್ತಿಕೊಂಡರಿರುವ ಕಾಮಗಾರಿಗಳ ಹುಡುಕಾಟದ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ಜೆಡಿಎಸ್ ಮುಖಂಡ ರಾಮನಗೌಡ ಏಗನೂರು ಹೇಳಿದರು. ನಗರ ಶಾಸಕ ಡಾ.ಶಿವರಾಜ ಪಾಟೀಲ್ 1 ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಪಡಿಸಿದ್ದೇನೆ ಎಂದು ಹೇಳುತ್ತಲೇ ಬಂದಿದ್ದಾನೆ. ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆಯೇ ಅಥವಾ ಕಾಗದದ ಮೇಲೆ ಲೆಕ್ಕಪತ್ರ ತೋರಿಸಿ ಗುಳುಂ ಮಾಡಲಾಗಿದೆಯೆ ಎಂಬುವುದು ತಿಳಿಯುತ್ತದೆ. ನಗರದ 35 ವಾರ್ಡ್ ಗಳ, 15 ಗ್ರಾಮಗಳಲ್ಲಿ ಕಾಮಗಾರಿಗಳ ಹುಡುಕಾಟದ ಅಭಿಯಾನ ನಡೆಯಲಿದೆ ಎಂದು ಹೇಳಿದ ಅವರು, ಯಾವ ವಾರ್ಡ್ ಲ್ಲಿ ಎಷ್ಟು ಕೋಟಿ ಅನುದಾನ ನೀಡಲಾಗಿದೆ. ಅದು ಕಾರ್ಯರೂಪಕ್ಕೆ ಬರಲಾಗಿದಿಯೇ? ಕೇವಲ ಫೋಟೋ ತೋರಿಸಿ ಬಿಲ್ ಎತ್ತುವಳಿ ಮಾಡಲಾಗಿದೆಯೇ ಎಂಬುವುದು ಅನುಮಾನವಿದೆ. ನಗರ ಶಾಸಕರು ಹೊಗಳುಭಟ್ಟರು ಎಂಬುವುದು ಎಲ್ಲರಿಗೂ ತಿಳಿದ ವಿಷಯ. 40% ಕಮೀಷನ್ ಪಡೆಯುತ್ತಿರುವ ಸಂದರ್ಭದಲ್ಲಿ ಕಾಮಗಾರಿ‌ ನಿರ್ವಹಿಸಲು ಸಾಧ್ಯವೇ? ಅನುದಾನ ತಂದಿದ್ದೇನೆ ಎಂದು ತಮ್ಮ ಸಹೋದರ ಮೂಲಕ ಕೊಳ್ಳಿ ಹೊಡೆಸುವ ಕೆಲಸದಲ್ಲಿ ನಿರತನಾಗಿದ್ದಾನೆ ಎಂಬುವುದು ಜಗ್ಗಜಾಹೀರ ವಿಷಯವಾಗಿದೆ. ನಗರ ಸಭೆ ಚುನಾವಣೆಯಲ್ಲಿ ಓರ್ವ ಸದಸ್ಯನಿಗೆ ಕೋಟಿ ಕೋಟಿ ಕಾಮಗಾರಿಗಳ ಭರವಸೆ ಮತ್ತು 40 ಲಕ್ಷ ನಗದು ಹಣ ನೀಡಿದ್ದು ನೋಡಿದರೆ ನಗರ ಶಾಸಕರು ಕಾಮಗಾರಿ ತರುವುದು ಇಂತಹ ಕಾನೂನು ಬಾಹಿರ ಕೃತ್ಯಕ್ಕೆ ಬಳಸಲೇ ಎಂಬ ಅನುಮಾನ ಮೂಡಿದೆ‌. ನಗರ ಅಭಿವೃದ್ಧಿಗೆ ಕೆಲಸ ಮಾಡುವುದು ಬಿಟ್ಟು ಲಕ್ಷಾಂತರ ಹಣ ನೀಡುವುದು. ಮತ್ತು ಭ್ರಷ್ಟಾಚಾರ ಹೊತ್ತಿರುವ ಸದಸ್ಯರನ್ನು ಬಚಾವ್ ಮಾಡುವುದು ಸೇರಿ‌ ಇನ್ನಿತರ ಆಮಿಷ ಹೊಡ್ಡಿ ನಗರವನ್ನು ಕಳ್ಳರ ಖಜಾನೆ ‌ಮಾಡಲು ಹೊರಟಿರುವುದು ಖಂಡನೀಯ. ಇಂತಹ ಶಾಸಕರ ಕಳ್ಳತನ ಬಯಲು ಮಾಡಿ ಜನರ ಮಂದೆ ಇಡುವುದೇ ಈ ಅಭಿಯಾನದ ಉದ್ದೇಶ ಎಂದು ತಿಳಿಸಿದರು.

6 views0 comments

Recent Posts

See All

ಬೆಂಗಳೂರು: ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರ ನಾಮನಿರ್ದೇಶಿತ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ಸು ಪಡೆದಿದೆ. ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು ಇರುವ ನಿಗಮ/ಮಂಡಳಿ/ಪ್ರಾಧಿಕಾರದ ಒಟ್ಟು 52 ಮಂದಿಯನ್ನು ಹಿಂಪಡೆದಿರುವುದಾಗಿ ಮುಖ್

bottom of page