top of page
  • Writer's pictureಹೈದ್ರಾಬಾದ್ ಕರ್ನಾಟಕ ಡೆಸ್ಕ್

ಸಾಲದ ಸುಳಿಯಲ್ಲಿ ‘ಆಚಾರ್ಯ’ ವಿತರಕರು: ಗೋಪಾಲ್ ರಿಂದ ನಟ ಚಿರಂಜೀವಿಗೆ ಪತ್ರ


ರಾಯಚೂರು ಮೂಲದ ವಿತರಕ, ಪ್ರದರ್ಶಕ ರಾಜ್​ಗೋಪಾಲ್ ಬಾಲಾಜಿ ಅವರು ಚಿರಂಜೀವಿಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ, ಶೇ.75 ನಷ್ಟ ಅನುಭವಿಸಿರುವ ಬಗ್ಗೆ ಅವರು ದೂರಿದ್ದಾರೆ. ರಾಯಚೂರು- ಆಚಾರ್ಯ’ ಸಿನಿಮಾ (Acharya Movie) ಯಾವ ರೀತಿಯಲ್ಲಿ ಸೋತಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ರಾಮ್​ ಚರಣ್ (Ram Charan) ಹಾಗೂ ಚಿರಂಜೀವಿ (Chiranjeevi) ಒಟ್ಟಾಗಿ ನಟಿಸಿದ ಸಿನಿಮಾ ಈ ರೀತಿಯ ಸೋಲು ಕಂಡಿತಲ್ಲ ಎನ್ನುವ ಬೇಸರ ಫ್ಯಾನ್ಸ್​ಗೆ ಇದೆ. ಇನ್ನು, ಈ ಸಿನಿಮಾ ವಿತರಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ನಷ್ಟ ಭರಿಸುವಂತೆ ಕೆಲವರು ನಿರ್ಮಾಣ ಸಂಸ್ಥೆಗೆ ಕೋರುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಕರ್ನಾಟಕದ ವಿತರಕರೊಬ್ಬರು ಚಿರಂಜೀವಿಗೆ ಪತ್ರ ಬರೆದಿದ್ದಾರೆ. ನಷ್ಟ ಭರಿಸಲು ಆಗ್ರಹಿಸಿದ್ದಾರೆ.

ರಾಯಚೂರು ಮೂಲದ ವಿತರಕ, ಪ್ರದರ್ಶಕ ರಾಜ್​ಗೋಪಾಲ್ ಬಾಲಾಜಿ ಅವರು ಚಿರಂಜೀವಿಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ, ಶೇ.75 ನಷ್ಟ ಅನುಭವಿಸಿರುವ ಬಗ್ಗೆ ಅವರು ದೂರಿದ್ದಾರೆ. ‘ಆಚಾರ್ಯ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿಲ್ಲ. ಇದರಿಂದ ನನಗೆ ತುಂಬಾ ನಿರಾಸೆಯಾಗಿದೆ. ನಾನು ಒಂದು ವರ್ಷದ ಹಿಂದೆ ಈ ಸಿನಿಮಾ ಬುಕ್ ಮಾಡಿದ್ದೆ. ಒಪ್ಪಿಕೊಂಡಂತೆ ಸಿನಿಮಾ ಬಿಡುಗಡೆಗೂ ಮುನ್ನ ಸಂಪೂರ್ಣ ಹಣ ನೀಡಿದ್ದೇನೆ. ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ ಎಂದು ಹೈದರಾಬಾದ್ ಮಂದಿ ಅಂದುಕೊಂಡಿದ್ದಾರೆ. ಆದರೆ, ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಓಡುತ್ತಿಲ್ಲ. ಈ ಸಿನಿಮಾದಿಂದ ನನಗೆ ಭಾರೀ ನಷ್ಟವಾಗಿದೆ’ ಎಂದು ಪತ್ರದಲ್ಲಿ ಹೇಳಿದ್ದಾರೆ ರಾಜ್​ಗೋಪಾಲ್ ಬಾಲಾಜಿ.

1 view0 comments

Recent Posts

See All

ಬೆಂಗಳೂರು: ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರ ನಾಮನಿರ್ದೇಶಿತ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ಸು ಪಡೆದಿದೆ. ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು ಇರುವ ನಿಗಮ/ಮಂಡಳಿ/ಪ್ರಾಧಿಕಾರದ ಒಟ್ಟು 52 ಮಂದಿಯನ್ನು ಹಿಂಪಡೆದಿರುವುದಾಗಿ ಮುಖ್

bottom of page