• ಹೈದ್ರಾಬಾದ್ ಕರ್ನಾಟಕ ಡೆಸ್ಕ್

ಸಚಿವ ಸಂಪುಟ ಪುನರ್ ರಚನೆ: ರಾಯಚೂರು ಜಿಲ್ಲೆಯ ಶಾಸಕರಿಗಿಲ್ಲ ಸ್ಥಾನ!

:ಪಿ.ರಾಜೀವ್, ವಿಜಯೇಂದ್ರ, ರಾಜೂಗೌಡ, ಪೂರ್ಣಿಮಾ, ಎಂ.ಪಿ.ಕುಮಾರಸ್ವಾಮಿ, ಬಸನಗೌಡ ಪಾಟೀಲ್ ಯತ್ನಾಳ, ಅರವಿಂದ ಬೆಲ್ಲದ್, ರೇಣುಕಾಚಾರ್ಯ, ಸಿ.ಪಿ.ಯೋಗೇಶ್ವರ, ಅಪ್ಪಚ್ಚು ರಂಜನ್/ಕೆ.ಜಿ.ಬೋಪಯ್ಯ, ರಾಮ್‌ದಾಸ್/ಪ್ರೀತಂಗೌಡ, ಅರವಿಂದ ಲಿಂಬಾವಳಿ, ದತ್ತಾತ್ರೇಯ ಪಾಟೀಲ್ ರೇವೂರ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ, ರವಿಕುಮಾರ್

ರಾಯಚೂರು.ಏ.೫-೨೦೨೩ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಸಂಪುಟ ಪುನರ್‌ರಚನೆ ಸಕಾಲ ಎಂದು ಭಾವಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಆಕಾಂಕ್ಷಿಗಳ, ಶಾಸಕರ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ್ದಾರೆ.

ಸಂಪುಟ ವಿಸ್ತರಣೆಯಾದರೆ ೪ ಸ್ಥಾನಗಳಿಗೆ ಮಾತ್ರ ಸಚಿವ ಸ್ಥಾನದ ಜವಾಬ್ದಾರಿ ನೀಡಬೇಕಾಗಿರುವುದರಿಂದ ಆಕಾಂಕ್ಷಿ ಶಾಸಕರು ಸಂಪುಟ ಪುನರ್‌ರಚನೆಯಲ್ಲಿ ಸ್ಥಾನ ಸಿಗದಿದ್ದರೆ ಅಸಮಾಧಾನ ವ್ಯಕ್ತಪಡಿಸುವ ಸಾಧ್ಯತೆಯಿರುವುದರಿಂದ ೯ ಜನ ಹಿರಿಯ ಸಚಿವರಿಗೆ ಕೋಕ್ ನೀಡಿ ೧೬ ಜನ ಯುವ ಶಾಸಕರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಇರೋ ೪ ಜನ ಸ್ಥಾನದ ಜೊತೆಗೆ ೧೦ ಜನರನ್ನು ಕೈಬಿಟ್ಟು ಯುವ ಕ್ಯಾಬಿನೆಟ್ ರಚಿಸಲು ಮುಂದಾಗಿದ್ದು, ಇದರಲ್ಲಿ ಜಿಲ್ಲೆಯ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಮತ್ತು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಇಲ್ಲದೇ ಇರುವುದು ಸಿಎಂ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಪಿ.ರಾಜೀವ್, ವಿಜಯೇಂದ್ರ, ರಾಜೂಗೌಡ, ಪೂರ್ಣಿಮಾ, ಎಂ.ಪಿ.ಕುಮಾರಸ್ವಾಮಿ, ಬಸನಗೌಡ ಪಾಟೀಲ್ ಯತ್ನಾಳ, ಅರವಿಂದ ಬೆಲ್ಲದ್, ರೇಣುಕಾಚಾರ್ಯ, ಸಿ.ಪಿ.ಯೋಗೇಶ್ವರ, ಅಪ್ಪಚ್ಚು ರಂಜನ್/ಕೆ.ಜಿ.ಬೋಪಯ್ಯ, ರಾಮ್‌ದಾಸ್/ಪ್ರೀತಂಗೌಡ, ಅರವಿಂದ ಲಿಂಬಾವಳಿ, ದತ್ತಾತ್ರೇಯ ಪಾಟೀಲ್ ರೇವೂರ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ, ರವಿಕುಮಾರ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಭು ಚವ್ಹಾಣ್, ಶಶಿಕಲಾ ಜೊಲ್ಲೆ, ಗೋವಿಂದ ಕಾರಜೋಳ, ವಿ.ಸೋಮಣ್ಣ, ಭೈರತಿ ಬಸವರಾಜ, ನಾರಾಯಣಗೌಡ, ಸಿ.ಸಿ.ಪಾಟೀಲ್, ಕೆ.ಎಸ್.ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿಗೆ ಕೋಕ್ ನೀಡುವ ಸಾಧ್ಯತೆಯಿದೆ.

ಇಂದು ಸಂಜೆ ವರಿಷ್ಠರ ಭೇಟಿಗೆ ಸಮಯ ಕೇಳಿರುವ ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ, ಜೆ.ಪಿ.ನಡ್ಡಾ ಭೇಟಿಗಾಗಿ ಸಜ್ಜಾಗಿದ್ದಾರೆ.

ಈ ಭೇಟಿಯು ನಾಳೆಯೂ ಮುಂದುವರೆಯಲಿದ್ದು, ಈ ವೇಳೆ ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ನೀಡುತ್ತಿರುವ ಅನಗತ್ಯ ಕಿರುಕುಳ, ತಮಿಳುನಾಡು ವಿಧಾನಸಭೆಯಲ್ಲಿ ಅಂಗಿಕಾರ ಮಾಡಿರುವ ಪ್ರಸ್ತಾಪ, ಕೃಷ್ಣಾ ಮತ್ತು ಮಹಾದಾಯಿ ನದಿನೀರು ಹಂಚಿಕೆ ಸಂಬAಧದ ಕುರಿತಂತೆ ಚರ್ಚೆ ನಡೆಯಲಿದೆ.52 views0 comments

Recent Posts

See All

ಬೆಂಗಳೂರು: ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರ ನಾಮನಿರ್ದೇಶಿತ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ಸು ಪಡೆದಿದೆ. ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು ಇರುವ ನಿಗಮ/ಮಂಡಳಿ/ಪ್ರಾಧಿಕಾರದ ಒಟ್ಟು 52 ಮಂದಿಯನ್ನು ಹಿಂಪಡೆದಿರುವುದಾಗಿ ಮುಖ್