ಹೈದ್ರಾಬಾದ್ ಕರ್ನಾಟಕ ಡೆಸ್ಕ್
ವಸಂತಕುಮಾರ್, ಯಾಸೀನ್ ರ ಪಕ್ಷ ವಿರೋಧ ನಡೆ- ಸಾಜೀದ್

ರಾಯಚೂರು- ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದ ಇಬ್ಬರು ನಗರಸಭೆ ಸದಸ್ಯರು ಸೇರಿ ಕಾಂಗ್ರೆಸ್ ನ ಎ. ವಸಂತ ಕುಮಾರ ಮತ್ತು ಮಾಜಿ ಶಾಸಕ ಸೈಯದ್ ಯಾಸಿನ್ ಅವರ ಪಕ್ಷ ವಿರೋಧಿ ಚಟುವಟಿಕೆ ವಿರುದ್ದ ಪಕ್ಷದ ಹೈಕಮಾಂಡ್ ಗೆ ದೂರು ನೀಡಲಾಗಿದೆ ಎಂದು ನಗರಸಭೆ ಸದಸ್ಯ ಸಾಜಿದ್ ಸಮೀರ್ ಹೆಸರು ಹೇಳದೆ ಪರೋಕ್ಷವಾಗಿ ಆರೋಪಿಸಿದರು. ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ವಿನಯ ಕುಮಾರ ವಿರುದ್ಧ ಅವಿಶ್ವಾಸ ಮಾಡುವಂತೆ ನಮ್ಮ ಮೇಲೆ ಒತ್ತಡ ಏರಿರುವ ವಸಂತಕುಮಾರ. ನಾವು ಅವಿಶ್ವಾಸದ ಪ್ರಸ್ಥಾಪಕ್ಕೆ ಸಹಿ ಮಾಡಲು ಸ್ವಲ್ಪ ವಿಳಂಬ ಮಾಡಿದ್ದಕ್ಕೆ ಮೇಲಿಂದ ಮೇಲೆ ನಮಗೆ ಕರೆ ಮಾಡಿ ಪ್ರಸ್ತಾಪಕ್ಕೆ ಸಹಿ ಹಾಕಿಸಿದರು, ನಂತರ ಬೆಂಬಲಕ್ಕೆ ನಿಲ್ಲದೆ ಮೌನವಹಿಸಿದ್ದು ಯಾಕೆ..? ನಮಗೆ ಧೋಖಾ ಮಾಡೋಕೆನಾ..? ಎಂದು ನೇರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಮಾಜಿ ಶಾಸಕ ಸೈಯದ್ ಯಾಸೀನ್ ಹೆಸರು ಪರೋಕ್ಷವಾಗಿ ಪ್ರಸ್ತಾಪಿಸಿ, ಮಾತೆತ್ತಿದರೆ ಮೈನಾರಿಟಿ ಅಂತಾರೆ, ನನಗೆ ಯಾಕೆ ಬೆಂಬಲಿಸಲಿಲ್ಲ..? ಬದಲಾಗಿ ಬಹಿರಂಗವಾಗಿ ನಾನು ಅಧ್ಯಕ್ಷನಾಗಲು ಬಿಡುವದಿಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿದ್ದರು. ಇದರ ಅರ್ಥ ಬೇರೆಯವರಿಗೆ ಅವಕಾಶ ಸಿಗಬಾರದೆಂಬ ಸ್ವಾರ್ಥ ಅವರಲ್ಲಿದೆ. ಕೇವಲ ತಮ್ಮ ಹಿತಕ್ಕಾಗಿ ನಮ್ಮನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಕಾಂಗ್ರೆಸ್ ವಕ್ತಾರರೆಂದು ಕರೆಸಿಕೊಳ್ಳುವ ಎ. ವಸಂತ ಕುಮಾರ ಅವರಿಗೆ ಪಕ್ಷೆ ನಿಷ್ಠೆ ಎಲ್ಲಿದೆ..? ಪಕ್ಷ ನಿಷ್ಠೆ ಎಂದು ಬಿಜೆಪಿ ಪಕ್ಷಕ್ಕೆ ಬೆಂಬಲಿಸಿ ನಮ್ಮ ಪಕ್ಷದವರನ್ನು ನಗರಸಭೆ ಅಧ್ಯಕ್ಷರ ಚುನಾವಣೆ ದಿನದಂದು ಗೈರಾಗುವಂತೆ ಒತ್ತಡ ಏರಿರುವದು ಏಕೆ..? ಎಂದು ಪ್ರಶ್ನಿಸಿ, ಅವಕಾಶ ಸಿಕ್ಕಾ ಸಮೀರ ಮುಸ್ಲೀಮರ ಬಗ್ಗೆ ಮಾತನಾಡಿ, ಮುಸ್ಲೀಮರಿಗೆ ಪ್ರಾತಿನಿದ್ಯ ಸಿಗುವಾಗ ತಮ್ಮ ಪೊಳ್ಳು ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಒಬ್ಬ ಮುಸ್ಲಿಂ ನಗರಸಭೆ ಸದಸ್ಯೆಯನ್ನು ಅಧ್ಯಕ್ಷರ ಚುನಾವಣೆಯಲ್ಲಿ ಗೈರು ಹಾಜರಾಗುವಂತೆ ಒತ್ತಡ ಮಾಡಿರುವದು ಅವರ ಇಬ್ಬಗೆ ನೀತಿಯನ್ನು ತೋರಿಸುತ್ತದೆ. ನಾವೆಲ್ಲರು ಒಗ್ಗಟ್ಟಾಗಿ ಈ ವಿನಯ ಕುಮಾರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಒಪ್ಪಂದದಂತೆ 15 ತಿಂಗಳ ನಂತರ ನನಗೆ ಬೆಂಬಲಿಸುವದಾಗಿ ವಿನಯ ಕುಮಾರ ಹೇಳಿದ್ದರು. ಎಲ್ಲಿ ಹೋಯಿತು ಆ ಮಾತು..? ಈ ಎಲ್ಲ ಪಕ್ಷ ವಿರೋಧಿ ಚಟುವಟಿಕೆಗಳ ವಿರುದ್ಧ ಹೈಕಮಾಂಡಗೆ ದೂರು ನೀಡಲಾಗಿದೆ ತಕ್ಷಣ ಕ್ರಮಕ್ಕಾಗಿ ಒತ್ತಾಯಿಸಲಾಗುವದು ಎಂದು ತಿಳಿಸಿದರು.