top of page
  • Writer's pictureಹೈದ್ರಾಬಾದ್ ಕರ್ನಾಟಕ ಡೆಸ್ಕ್

ರಾಯಚೂರು‌ ನಗರ ಸಭೆ ಬಿಜೆಪಿ‌ ವಶಕ್ಕೆ

ರಾಯಚೂರು, ಮಾ.30-ತೀವ್ರ ಕುತೂಹಲ ಕೆರಳಿಸಿದ್ದ ರಾಯಚೂರು ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ನಗರದ 18 ನೇ ವಾರ್ಡಿನ ನಗರಸಭೆ ಬಿಜೆಪಿ ಸದಸ್ಯೆ ಲಲಿತಾ ಆಂಜನೇಯ ಕಡಗೋಲು ಅವರು 19 ಮತಗಳನ್ನು ಪಡೆಯುವುದರ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ಅವರ ವಿರುದ್ಧ ಸ್ಪರ್ಧಿಸಿದ್ದ ಸಾಜೀದ್ ಸಮೀರ್ 15 ಮತಗಳನ್ನು ಪಡೆದು ಸೋತಿದ್ದಾರೆ. ಓರ್ವರು ಪರೋಕ್ಷ ಮತದಾನ ಮಾಡಿದ್ದಾರೆ. ಮೂರು ಜನ ಸದಸ್ಯರು ಗೈರು ಹಾಜರಾಗಿದ್ದಾರೆ. 12 ನೇ ವಾರ್ಡಿನ ಈ. ವಿನಯಕುಮಾರ, ವಾರ್ಡ್ ನಂ. 26 ರ ಶೈನಾಜ್ ಬೇಗಂ, ವಾರ್ಡ್ ನಂ. 8 ನ ಜೆಡಿಎಸ್ ಸದಸ್ಯರೊಬ್ಬರು ಗೈರು ಹಾಜರು ಆಗಿದ್ದರು.

ಇಂದು ಆರಂಭವಾದ ಚುನಾವಣೆಯಲ್ಲಿ ಮೂರು ಜನ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ಲಲಿತಾ ಆಂಜನೇಯ ಕಡಗೋಲು ಹಗೂ ಸರೋಜಮ್ಮ ದೊಡ್ಡಮಲ್ಲೇಶ ಹಾಗೂ ಕಾಂಗ್ರೆಸ್ ನಿಂದ ಸಾಜೀದ್ ಸಮೀರ್ ನಾಮಪತ್ರ ಸಲ್ಲಿಸಿದರು. ನಂತರ ನಾಮಪತ್ರ ವಾಪಸ್ಸು ಪಡೆಯುವ ವೇಳೆ ಮುಗಿಯುವ ಮುನ್ನವೇ ಸರೋಜಮ್ಮ ನಾಮಪತ್ರ ಹಿಂಪಡೆದಿದ್ದರಿಂದ ನೇರ ಸ್ಪರ್ಧೆ ಏರ್ಪಟ್ಟಿತ್ತು.

ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ 19 ಮತಗಳನ್ನು ಕಾಂಗ್ರೆಸ್ 15 ಮತಗಳನ್ನು ಹಾಗೂ ಓರ್ವ ಸದಸ್ಯ ಪರೋಕ್ಷ ಮತದಾನ ಮಾಡಿದ್ದಾರೆಂದು ಚುನಾವಣೆಯ ನಂತರ ಖುಷಿಯಲ್ಲಿದ್ದ ನಗರ ಶಾಸಕ ಶಿವರಾಜ್ ಪಾಟೀಲ ಕೇಂದ್ರ ಹೊರಗಡೆ ಈ ವಿಷಯ ತಿಳಿಸಿದರು.

ನಂತರ ಪಕ್ಷದ ಕಾರ್ಯಕರ್ತರು ಗುಲಾಲ ಎರಚಿಕೊಂಡು ಸಂಭ್ರಮಾಚರಣೆಯಲ್ಲಿ ತೊಡಗಿದರು. ಶಾಸಕರು ಅದರಲ್ಲಿ ಪಾಲ್ಗೊಂಡಿದ್ದು ವಿಶೇಷ.

ಮಾತು ತಪ್ಪಿದ ಈ ವಿನಯಕುಮಾರ್

ಕಳೆದ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ನ ಈ. ವಿನಯ್ ಕುಮಾರ್ ಅಧ್ಯಕ್ಷ ಗಾದೆಯೇರಿದ ಸಂದರ್ಭದಲ್ಲಿ ಸಾಜೀದ್ ಸಮೀರ್ ಗೆ ಮಾತು ಕೊಟ್ಟಿದ್ದರು. ಉಳಿದ ಅವಧಿಯಲ್ಲಿ ಎರಡು ಭಾಗ ಮಾಡಿ ಮೊದಲ ಅವಧಿಗೆ ತಾವು ನಂತರ ಅವಧಿಗೆ ಸಾಜಿದ್ ಸಮೀರ ಗೆ ಬಿಟ್ಟುಕೊಡುವುದಾಗಿ ಮಾತು ಕೊಟ್ಟಿದ್ದರು ಎನ್ನಲಾಗಿದೆ. ಆದರೆ ಈ ಚುನಾವಣೆಯಲ್ಲಿ ಸಾಜಿದ್ ಗೆ ಕೈ ಕೊಟ್ಟು ಮಾತು ತಪ್ಪಿ ತಮ್ಮ ಪಕ್ಷದ ಅಭ್ಯರ್ಥಿ ಸೋಲುವಂತೆ ಮಾಡುವಲ್ಲಿ ಪರೋಕ್ಷ ಸಹಾಯ ಮಾಡಿ, ಮಾತುತಪ್ಪಿದ್ದಾರೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿದೆ.

2 views0 comments

Recent Posts

See All

ಬೆಂಗಳೂರು: ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರ ನಾಮನಿರ್ದೇಶಿತ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ಸು ಪಡೆದಿದೆ. ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು ಇರುವ ನಿಗಮ/ಮಂಡಳಿ/ಪ್ರಾಧಿಕಾರದ ಒಟ್ಟು 52 ಮಂದಿಯನ್ನು ಹಿಂಪಡೆದಿರುವುದಾಗಿ ಮುಖ್

bottom of page