• ಹೈದ್ರಾಬಾದ್ ಕರ್ನಾಟಕ ಡೆಸ್ಕ್

ಮನೋಸ್ಥೈರ್ಯ ಹೆಚ್ಚಿಸಿಕೊಳ್ಳಲು ಕ್ರೀಡಾಕೂಟಗಳು ಅವಶ್ಯಕ - ಶಾಸಕ ದದ್ದಲ


ರಾಯಚೂರು- ನೌಕರಿಯ ಒತ್ತಡದಿಂದ ಹೊರಬಂದು ಮನೋಸ್ಥೈರ್ಯ ಹೆಚ್ಚಿಸಿಕೊಳ್ಳಲು ಕ್ರೀಡಾಕೂಟಗಳುಚ ಅವಶ್ಯಕ ಎಂದು ಶಾಸಕ ಬಸನಗೌಡ ದದ್ದಲ ಹೇಳಿದರು.

ಇಂದು ಜಿಲ್ಲಾ ಪೋಲಿಸ್ ಮೈದಾನದಲ್ಲಿ ನಡೆದ ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ವರ್ದೇಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ ಅವರು ಸರಕಾರಿ ನೌಕರರು ಪ್ರಸ್ತುತ ದಿನಮಾನಗಳಲ್ಲಿ ತುಂಬಾ ಒತ್ತಡದಲ್ಲಿ ನೌಕರರು ನೌಕರರಿಯನ್ನು ನಿಭಾಯಿಸುತ್ತಿದ್ದು ಒತ್ತಡದಿಂದ ಹೊರಬಂದು ಉತ್ಸಾಹದಿಂದ ಕೆಲಸಗಳನ್ನು ನಿರ್ವಹಿಸಲು ನೌಕರರಿಗೆ ವಿವಿಧ ರೀತಿಯ ಕ್ರೀಡಾಕೂಟದ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವು ಉಪಯೋಗವಾಗಿದ್ದು ಕಾರ್ಯಕ್ರಮವನ್ನು ಆಯೋಜಿಸಿರುವುದು ಇಲಾಖೆಗೆ ಮತ್ತು ನೌಕರರ ಸಂಘಕ್ಕೆ ಅಭಿನಂದನೆಗಳು ಕಾರ್ಯಕ್ರಮವನ್ನು ಸಂತೋಷದಿಂದ ಉದ್ಘಾಟಿಸಿರುವುದಾಗಿ ತಿಳಿಸಿದರು

ಭಾಗವಹಿಸಿದ ನೌಕರರಿಗೆ ಪ್ರತಿಜ್ಞಾ ವಿಧಿಯನ್ನು ಅಪರ ಜಿಲ್ಲಾಧಿಕಾರಿಗಳಾದ ದುರಗೇಶ ಕೆ ಆರ್ ಬೋಧಿಸಿದರು. ಕಾರ್ಯಕ್ರಮದಲ್ಲಿ ನಗರಸಭೆ ನೂತನ ಅಧ್ಯಕ್ಷರಾದ ಲಲಿತ ಆಂಜನೇಯ ಸಹಾಯಕ ನಿರ್ದೇಶಕರಾದ ಹನುಮಂತ, ಜಿಲ್ಲಾಧ್ಯಕ್ಷರಾದ ಭೀಮಣ್ಣ ನಾಯಕ್ ,ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದಾರ, ಚಂದ್ರಶೇಖರ ಹಿರೇಮಠ, ಅಯ್ಯನಗೌಡ , ಶ್ರೀಶೈಲಗೌಡ, ಹನುಮಂತರಾಯ ಶಾಖೆ, ಸಂತೋಷ್ ನಂದಿನಿ, ಆನಂದ, ಮೋಹನ, ಶ್ರೀನಿವಾಸ್, ರಾಘವೇಂದ್ರ, ಸುರೇಶ ಸಂಗಮೇಶ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.


35 views0 comments

Recent Posts

See All

ಬೆಂಗಳೂರು: ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರ ನಾಮನಿರ್ದೇಶಿತ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ಸು ಪಡೆದಿದೆ. ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು ಇರುವ ನಿಗಮ/ಮಂಡಳಿ/ಪ್ರಾಧಿಕಾರದ ಒಟ್ಟು 52 ಮಂದಿಯನ್ನು ಹಿಂಪಡೆದಿರುವುದಾಗಿ ಮುಖ್