ಹೈದ್ರಾಬಾದ್ ಕರ್ನಾಟಕ ಡೆಸ್ಕ್
ಬೆಲೆ ಏರಿಕೆ: ಕಾಂಗ್ರೆಸ್ ಪ್ರತಿಭಟನೆ

ಬಳ್ಳಾರಿ ಏ 01. ನಗರದ ರಾಯಲ್ ವೃತ್ತದಲ್ಲಿ (ಗಡಗಿ ಚೆನ್ನಪ್ಪ ವೃತ್ತ), ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎಸ್.ಮಹಮ್ಮದ್ ರಫೀಕ್ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ಮಾಡಲಾಯಿತು. ಹಣದುಬ್ಬರ ಮತ್ತು ಪೆಟ್ರೋಲ್, ಡೀಸೆಲ್, ಎಲ್.ಪಿ.ಜಿ, ಸಿ.ಎನ್.ಜಿ, ಮತ್ತು ಪಿ.ಎನ್.ಜಿ, ಬೆಲೆಗಳಲ್ಲಿನ ವಿಪರೀತ ಹೆಚ್ಚಳದ ವಿರುಧ್ಧ ಜನಪರವಾಗಿ ಧ್ವನಿ ಎತ್ತಲು,ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ವತಿಯಿಂದ ಬೆಲೆ ಏರಿಕೆ ಮುಕ್ತ ಭಾರತ ಅಭಿಯಾನ ಪ್ರಯುಕ್ತ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಈ ವೇಳೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಕಲ್ಲುಕಂಭ ಪಂಪಾಪತಿ, ಎಲ್.ಮಾರೆಣ್ಣ, ಎ.ಮಾನಯ್ಯ, ಜಿಲ್ಲಾ ಕಾಂಗ್ರೆಸ್ ಪಕ್ಷದ ಉಪಾಧ್ಯಾಕ್ಷರಾದ ಶ್ರೀಮತಿ ಕುಮಾರಮ್ಮ, ಮೇಟಿ ಪಂಪನಗೌಡ, ಪ್ರಧಾನ ಕಾರ್ಯದರ್ಶಿಗಳಾದ ಕಾಂತಿನೋಹ ವಿಲ್ಸನ್, ಮೇಟಿ ದಿವಾಕರ್ ಗೌಡ, ಐ.ಎನ್.ಟಿ.ಯು.ಸಿ. ಜಿಲ್ಲಾ ಅಧ್ಯಕ್ಷರಾದ ಕೆ.ತಾಯಪ್ಪ, ಬ್ಲಾಕ್ ಅಧ್ಯಕ್ಷರುಗಳಾದ ಪೇರಂ ವಿವೇಕ್(ವಿಕ್ಕಿ), ಅಸುಂಡಿ ಹೊನ್ನುರಪ್ಪ,
ನೂತನ ಮಹಾಪೌರರಾದ ರಾಜೇಶ್ವರಿ ಸುಬ್ಬರಾಯುಡು, ಮಹಾನಗರ ಪಾಲಿಕೆಯ ಸದಸ್ಯರಾದ ಜಗನ್, ಕುಬೇರ, ರಾಜಶೆಖರ್, ನಾಗಲಕೇರಿ ಗೋವಿಂದ, ಕೆ.ಉಮಾಪತಿ, ಡಿ.ತ್ರಿವೇಣಿ, ಮಾಲನ್ ಬೀ, ಪಿ.ಗಾದೇಪ್ಪ, ಶ್ರೀನಿವಾಸಲು, ಮುಂಚೂಣಿ ಘಟಕಗಳ ಅಧ್ಯಕ್ಷರುಗಳಾದ ಸರಗೂ ನಾಗರಾಜ್, ಲೀನಾ ರೆಡ್ಡಿ, ಲಕ್ಷ್ಮಣ, ಮನ್ಯಂ ಶ್ರೀಧರ್, ಅಲಿವೇಲು ಸುರೇಶ್, ವಿಷ್ಣು, ಕೌಲ್ ಬಜಾರ್ ಬ್ಲಾಕ್ ಉಪಾಧ್ಯಕ್ಷರಾದ ಉದಯ್, ಕಾರ್ಯದರ್ಶಿಗಳಾದ ಶಾಂತಮ್ಮ, ಟಿ.ಪದ್ಮ, ಬಿ.ಎ.ಮಲ್ಲೇಶ್ವರಿ,
ಸಮೀರ್, ಅಲ್ಲ ಬಖಾಷ್, ದ್ರಾಕ್ಷಾಯಿಣಿ, ಅತ್ತಾವುಲ್ಲಾ, ಅರುಣ್ ಕುಮಾರ್, ರವಿ, ಶಂಕರ್, ಸುಭಾನ್, ವಿ.ತಿಪ್ಪಯ್ಯ, ನಾಗರಾಜ್, ಎರ್ರಿಸ್ವಾಮಿ, ಚಂಪ್ಪ, ಬಜ್ಜಪ್ಪ, ಶೇಕ್ ಅಫಕ್ ಹುಸ್ಸೇನ್, ಇಮಾಮ್ ಹುಸ್ಸೇನ್, ಲಿಂಗರಾಜ್, ಬಿ.ವಿಜಯ್ ಕುಮಾರ್, ಯೋಗೆಶ್ ಕುಮಾರ್, ರಾಜೇಶ್, ವಿವೇಕ್, ಸಾಧಿಕ್, ಮೆಹಬೂಬ್ ಭಾಷಾ, ಶಕೀರ್ ಅಹಮ್ಮದ್, ಅಬ್ದುಲ್, ವೇಣುಗೋಪಾಲ್,ಪ್ರಮೀಳಾ, ಶ್ರೀನಿವಾಸಲು, ರಂಗಸ್ವಾಮಿ, ಮಹೇಶ್,
ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.