top of page
  • Writer's pictureಹೈದ್ರಾಬಾದ್ ಕರ್ನಾಟಕ ಡೆಸ್ಕ್

ಬಾಂಧವ್ಯದ ಭಾವುಕ ಕಥಾನಕ ಚಾರ್ಲೀ

ನಾಯಿ ಹಾಗೂ ಮನುಷ್ಯನ ನಡುವೆ ಅನಾದಿ ಕಾಲದಿಂದಲೂ ಸಾಗಿ ಬಂದಿರುವ ಸ್ನೇಹ, ಪ್ರೀತಿ ಪದಗಳಿಗೆ ನಿಲುಕುವಂಥಹದ್ದಲ್ಲ. ಯುಗ-ಯುಗಗಳು ಕಳೆದರೂ ಪರಸ್ಪರರ ಮೇಲಿನ ಪ್ರೀತಿ, ಅವಲಂಬನೆ ಜಾರಿಯಲ್ಲಿದೆ. ಇಂಥಹಾ ಅನೂಹ್ಯ ಬಾಂಧವ್ಯವನ್ನು ಸಿನಿಮಾ ಚೌಕಟ್ಟಿನಲ್ಲಿ ಕಟ್ಟಿಕೊಡುವ ಪ್ರಯತ್ನ ಕನ್ನಡದ ಸಿನಿಮಾ '777 ಚಾರ್ಲಿ'. ತಮ್ಮ ಈ ಪ್ರಯತ್ನದಲ್ಲಿ ಯಶಸ್ಸು ಗಳಿಸಿದ್ದಾರೆ ನಿರ್ದೇಶಕ ಕಿರಣ್ ರಾಜ್.

Aಧರ್ಮರಾಯ, ತನ್ನ ಪ್ರೀತಿಯ ನಾಯಿಗಾಗಿ ಸ್ವರ್ಗವನ್ನೇ ತಿರಸ್ಕರಿಸಿದ ಕತೆಯೊಂದು ಮಹಾಭಾರತದಲ್ಲಿದೆ. '777 ಚಾರ್ಲಿ' ಕನ್ನಡ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ 'ಕಲಿಯುಗದ ಧರ್ಮರಾಯ'. ಹೀಗಾಗಿಯೇ ಸಿನಿಮಾದಲ್ಲಿ ಅವರ ಪಾತ್ರದ ಹೆಸರು 'ಧರ್ಮ'. ನಾಯಿ ಹಾಗೂ ಮನುಷ್ಯನ ನಡುವೆ ಅನಾದಿ ಕಾಲದಿಂದಲೂ ಸಾಗಿ ಬಂದಿರುವ ಸ್ನೇಹ, ಪ್ರೀತಿ ಪದಗಳಿಗೆ ನಿಲುಕುವಂಥಹದ್ದಲ್ಲ. ಯುಗ-ಯುಗಗಳು ಕಳೆದರೂ ಪರಸ್ಪರರ ಮೇಲಿನ ಪ್ರೀತಿ, ಅವಲಂಬನೆ ಜಾರಿಯಲ್ಲಿದೆ. ಇಂಥಹಾ ಅನೂಹ್ಯ ಬಾಂಧವ್ಯವನ್ನು ಸಿನಿಮಾ ಚೌಕಟ್ಟಿನಲ್ಲಿ ಕಟ್ಟಿಕೊಡುವ ಪ್ರಯತ್ನ ಕನ್ನಡದ ಸಿನಿಮಾ '777 ಚಾರ್ಲಿ'. ತಮ್ಮ ಈ ಪ್ರಯತ್ನದಲ್ಲಿ ಯಶಸ್ಸು ಗಳಿಸಿದ್ದಾರೆ ನಿರ್ದೇಶಕ ಕಿರಣ್ ರಾಜ್. ಧರ್ಮ (ರಕ್ಷಿತ್ ಶೆಟ್ಟಿ) ತನ್ನದೇ ಆದ ವೈಯಕ್ತಿಕ ಕಾರಣಗಳಿಂದಾಗಿ ಸಮಾಜಕ್ಕೆ ವಿಮುಖನಾಗಿ ಬದುಕುತ್ತಿರುವ ಏಕಾಂಗಿ. ಅವನ ಬಾಳಿನಲ್ಲಿ ಅಚಾನಕ್ಕಾಗಿ ಮುದ್ದಾದ ನಾಯಿಯೊಂದರ ಪ್ರವೇಶವಾಗುತ್ತದೆ. ಆರಂಭದಲ್ಲಿ ನಾಯಿಯ ಸಾಂಗತ್ಯ ಧರ್ಮನಿಗೆ ಕಿರಕಿರಿ ತಂದರೂ ಒಂದು ಸಂದರ್ಭದಲ್ಲಿ ನಾಯಿಯ ಮೇಲೆ ಧರ್ಮನಿಗೆ ಪ್ರೇಮ ಉಕ್ಕುತ್ತದೆ. ಇದಕ್ಕೆ ಮಹಾನ್ ಮಾನವತಾವಾದಿ, ನಟ ಚಾರ್ಲಿ ಚಾಪ್ಲಿನ್ ಸಹ ಕಾರಣನಾಗುತ್ತಾನೆ! ಧರ್ಮ-ಚಾರ್ಲಿಯ ಸ್ನೇಹ-ಬಾಂಧವ್ಯ ಚೆನ್ನಾಗಿಯೇ ಸಾಗುತ್ತಿದ್ದ ಸಂದರ್ಭದಲ್ಲಿ ಧುತ್ತನೆ ವಿಷಮ ಸಂಗತಿಯೊಂದು ಬೆಳಕಿಗೆ ಬರುತ್ತದೆ ಅಲ್ಲಿಂದ ಕತೆಯ ಹಾದಿ ಹೊರಳುತ್ತದೆ. ಆ ವರೆಗೆ ಮೈಸೂರಿನ ಕಾಲೊನಿಯೊಂದರಲ್ಲಿ ಕತೆ, ಭಾರತದ ಉತ್ತರದತ್ತ ಹೊರಟು ನಿಲ್ಲುತ್ತದೆ. ಪಾತ್ರಗಳ ಪರಿಚಯ, ಧರ್ಮನ ವ್ಯಕ್ತಿತ್ವ ಅನಾವರಣಕ್ಕೆ ಸಿನಿಮಾದ ಮೊದಲಾರ್ಧ ತುಸು ಸಮಯ ಮೀಸಲಿಟ್ಟಿದ್ದಾರೆ ನಿರ್ದೇಶಕ. ಬಳಿಕ ನಾಯಿ ಚಾರ್ಲಿಯ ಮುದ್ದುತನ, ಪೆದ್ದುತನ, ಚಾರ್ಲಿಯ ತುಂಟಾಟ, ಧರ್ಮನ ಪರದಾಟಗಳೆಲ್ಲವು ನೋಡುಗರಿಗೆ ಕಚಗುಳಿ ಇಡುತ್ತವೆ. ನಾಯಿಯ ಪೋಷಣೆಯ ಬಗ್ಗೆಯೂ ಕೆಲವು ಮಾಹಿತಿಯನ್ನು ದೃಶ್ಯಗಳ ನಡುವೆ ಜಾಣ್ಮೆಯಿಂದ ಸೇರಿಸಿದ್ದಾರೆ ನಿರ್ದೇಶಕ. ಇನ್ನೇನು ಎಲ್ಲವೂ ಸರಿಹೋಯ್ತೆನ್ನುವ ವೇಳೆಗೆ ಇಂಟರ್ವೆಲ್‌ನಲ್ಲಿ ದೊಡ್ಡ ಟ್ವಿಸ್ಟ್‌ ಒಂದು ಎದುರಾಗುತ್ತದೆ. ಅಲ್ಲಿಂದ ಆರಂಭ ಧರ್ಮ-ಚಾರ್ಲಿಯ ಭಾವ ಪ್ರಯಾಣ. ದ್ವಿತೀಯಾರ್ಧದಲ್ಲಿ ಭಾವ ಪಯಣ ಸಿನಿಮಾದ ದ್ವಿತೀಯಾರ್ಧ ಧರ್ಮ-ಚಾರ್ಲಿಯ ನಡುವಿನ ಪ್ರೇಮದ ಉತ್ಕಟತೆಯ ಅನಾವರಣವಾಗುತ್ತದೆ. ದ್ವೀತೀಯಾರ್ಧದಲ್ಲಿ ಸೆಂಟಿಮೆಂಟ್‌ನದ್ದೇ ಮೇಲುಗೈ ಆದರೂ ಅಲ್ಲಲ್ಲಿ ಹಾಸ್ಯದ ಪಂಚ್, ಧರ್ಮ ಹಾಗೂ ಚಾರ್ಲಿಯ ಕೆಲವು 'ಹೀರೋಯಿಕ್' ಸನ್ನಿವೇಶಗಳೊಂದಿಗೆ ಸಮತೋಲನ ಕಾಯ್ದುಕೊಂಡಿದ್ದಾರೆ ನಿರ್ದೇಶಕ. ಪ್ರೇಕ್ಷಕನನ್ನು 'ಸೆಂಟಿಮೆಂಟ್ ಸಾಗರ'ದೊಳಗೆ ಮುಳುಗಿಸಬಹುದಾದ ಎಲ್ಲ ಅವಕಾಶಗಳಿದ್ದರೂ ಅಲ್ಲಲ್ಲಿ ಸಂಯಮ ಕಾಯ್ದುಕೊಂಡಿರುವ ನಿರ್ದೇಶಕ ಆ ಕಾರ್ಯಕ್ಕೆ ಸಿನಿಮಾದ ಕ್ಲೈಮ್ಯಾಕ್ಸ್‌ವರೆಗೆ ಕಾದಿದ್ದಾರೆ.

1 view0 comments
bottom of page