top of page
  • Writer's pictureಹೈದ್ರಾಬಾದ್ ಕರ್ನಾಟಕ ಡೆಸ್ಕ್

ನಗರಸಭೆ ಸದಸ್ಯೆ ರೇಣಮ್ಮ ಬಂಧನ!

ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಆರೋಪದ ಮೇಲೆ ಬಂಧನ

ರಾಯಚೂರು,ಮಾ.೩೦- ನಗರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ಮತದಾನದ ನಂತರ ವಾರ್ಡ್ ನಂ.೩೧ರ ಸದಸ್ಯೆ ರೇಣುಕಮ್ಮ ಅವರನ್ನು ಬಂಧಿಸಿದ ಘಟನೆ ನಡೆಯಿತು.

ಕಳೆದ ನಗರಸಭೆ ಸದಸ್ಯ ಸ್ಥಾನಕ್ಕಾಗಿ ವಾರ್ಡ್ ನಂ.೩೧ರ ಅಭ್ಯರ್ಥಿಯಾಗಿ ರೇಣುಕಮ್ಮ ಅವರು ಸ್ಪರ್ಧಿಸಿದ್ದರು. ಆದರೆ ನಗರಸಭೆ ಸದಸ್ಯ ಸ್ಥಾನದ ಚುನಾವಣೆಯಲ್ಲಿ ನಕಲು ಜಾತಿ ಪ್ರಮಾಣ ಪತ್ರ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದರು ಎನ್ನುವ ಕಾರಣದಿಂದ ನಗರಸಭೆಯಲ್ಲಿ ಇವರ ಕಾರ್ಯ ಚಟುವಟಿಕೆಗೆ ಕೋರ್ಟ್ ತಡೆಯಾಜ್ಞೆ ನೀಡಿತ್ತು, ನಗರಸಭೆಯ ಸದಸ್ಯ ಸ್ಥಾನಕ್ಕಾಗಿ ಶಿಳ್ಳೇ ಕ್ಯಾತ ಸಮುದಾಯ ಎಂಬುವುದನ್ನು ತೆಗೆಸಿ ಕಿಳ್ಳೇ ಕ್ಯಾತ ಎಂಬ ನಕಲಿ ಜಾತಿ ಪ್ರಮಾಣ ಪತ್ರವನ್ನು ಸೃಷ್ಠಿಸಿ ಚುನಾವಣೆಯಲ್ಲಿ ಜಯಶೀಲರಾಗಿದ್ದರು. ಹಾಗೂ ವಾರ್ಡ್ ನಂ.೩೧ರ ಸದಸ್ಯರಾಗಿ ಆಯ್ಕೆಯಾದರು. ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಠಿಸಿದ ಕಾರಣ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೇ ವಿಚಾರಕ್ಕಾಗಿ ನಗರಸಭೆಯಲ್ಲಿ ಇವರ ಕಾರ್ಯ ಚಟುವಟಿಕೆಗೆ ತಡೆಯಾಜ್ಞೆ ನೀಡಲಾಗಿತ್ತು. ಆದರೆ ಇಂದು ನಡೆದ ನಗರಸಭೆ ಅಧ್ಯಕ್ಷ ಚುನಾವಣೆಗೆ ಮತದಾನ ಹಕ್ಕು ನೀಡುವಂತೆ ಹೈಕೋರ್ಟ್ ಮೊರೆ ಹೋಗಲಾಗಿದ್ದು, ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಇವರಿಗೆ ಮತದಾನ ಹಕ್ಕು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿತು. ಆದಾಗ್ಯೂ ‌ ರೇಣುಕಮ್ಮ ಬಂಧನ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮತದಾನ ಮಾಡಿ ಹೊರಗೆ ಬಂದ ತಕ್ಷಣ ಪೋಲಿಸರಿಂದ ವಾರ್ಡ್ ನಂ.೩೧ರ ನಗರಸಭೆ ಸದಸ್ಯೆ ರೇಣುಕಮ್ಮ ಅವರನ್ನು ಬಂಧಿಸಿ ಪೋಲಿಸ್ ಠಾಣೆಗೆ ಕರೆದೊಯ್ಯಲಾಯಿತು. ಈ ವೇಳೆ ರೇಣುಕಮ್ಮ ಅವರು, ಆಕ್ಷೇಪ ವ್ಯಕ್ತಪಡಿಸಿದರು. ಮೇಲಾಧಿಕಾರಿಗಳ ಆದೇಶದಂತೆ ಅವರನ್ನು ಬಂಧಿಸಿದ್ದೇವೆ ಎಂದು‌ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

4 views0 comments

Recent Posts

See All

ಬೆಂಗಳೂರು: ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರ ನಾಮನಿರ್ದೇಶಿತ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ಸು ಪಡೆದಿದೆ. ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು ಇರುವ ನಿಗಮ/ಮಂಡಳಿ/ಪ್ರಾಧಿಕಾರದ ಒಟ್ಟು 52 ಮಂದಿಯನ್ನು ಹಿಂಪಡೆದಿರುವುದಾಗಿ ಮುಖ್

bottom of page