top of page
  • Writer's pictureಹೈದ್ರಾಬಾದ್ ಕರ್ನಾಟಕ ಡೆಸ್ಕ್

ಕವಿತಾಳದ ಹುಡುಗ ಈಗ ಜೀ ಕನ್ನಡದ ನಾನ್ ಫಿಕ್ಷನ್ ಮುಖ್ಯಸ್ಥ!ರಾಯಚೂರು.ಡಿ.೨೧-ಹಳ್ಳಿ ಸೊಗಡಿನ ಕಲಾಪ್ರಕಾರ ಬಯಲಾಟದಂತಹ ನಾಟಕಗಳನ್ನು ಕಿರುತೆರೆಯ ಮುಖಾಂತರ ಪ್ರದರ್ಶಿಸಿ ಸ್ಥಳೀಯತೆಯ ಅಸ್ಮಿತೆಗೆ ವ್ಯಾಖ್ಯಾನ ನೀಡಿದ ಕೀರ್ತಿ ಕವಿತಾಳದ ಹುಡುಗ ಶರಣಯ್ಯಗೆ ಸಲ್ಲುತ್ತದೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕವಿತಾಳ ಪಟ್ಟಣದಲ್ಲಿ ಬೆಳೆದು ಕಿರಿಯ ಪ್ರಾಥಮಿಕ ಶಾಲೆ ಅಭ್ಯಾಸ ಮಾಡಿದ್ದ ಶರಣಯ್ಯ ಕಾರಟಗಿ ತಾಲೂಕಿನ ತಿಮ್ಮಾಪುರದಲ್ಲಿ ಜನಿಸಿದವರು. ೨೦ನೇ ಶತಮಾನದ ಪೂರ್ವ ಮತ್ತು ಉತ್ತರದ ಕಂಪನಿ ನಾಟಕಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದ ನಾಟಕಗಳನ್ನು ನೋಡಿ ವಿವಿಧ ನಟರ ಶೈಲಿಯನ್ನು ಅನುಕರಣೆ ಮಾಡುತ್ತಿದ್ದ ಹುಡುಗ ಈಗ ಟೆಲಿವಿಷನ್ ವಲಯದಲ್ಲಿ ಉನ್ನತ ಸ್ಥಾನದಲ್ಲಿರುವ ಜೀ ಕನ್ನಡ ಚಾನಲ್‌ನ ನಾನ್ ಫಿಕ್ಷನ್ ಮುಖ್ಯಸ್ಥರಾಗಿದ್ದಾರೆ.

ತಾಯಿಯ ಊರಾದ ಕವಿತಾಳ ಪಟ್ಟಣದಲ್ಲಿ ನಡೆಯುತ್ತಿದ್ದ ಜಾತ್ರೆಗಳಿಗೆ ನಾಟಕ ಪ್ರದರ್ಶನಕ್ಕಾಗಿ ಬರುತ್ತಿದ್ದ ಹಲವು ಕಂಪನಿ ನಾಟಕಗಳ ಬಗ್ಗೆ ಇದ್ದ ಆಕರ್ಷಣೆ ಕಲಾಪ್ರಕಾರಗಳಿಗೆ ಮಾನ್ಯತೆ ನೀಡುವಂತೆ ಮಾಡಿದ್ದು. ಹಳ್ಳಿಯ ಸೊಗಡಿನಲ್ಲಿ ಅಡಗಿರುವ ಕಲೆಯ ಬಗ್ಗೆ ಇರುವ ಆಳವಾದ ಜ್ಞಾನ ಕಾಳಜಿ ಕಾರಣ. ಡ್ರಾಮಾ ಜ್ಯೂನಿರ‍್ಸ್ ರಿಯಾಲಿಟಿ ಶೋಗಳ ಮೂಲಕ ವೃತ್ತಿ ಮತ್ತು ಪ್ರವೃತ್ತಿಯನ್ನು ತನ್ನದಾಗಿಸಿಕೊಂಡು ಹಳ್ಳಿಯ ಸೊಗಡುಗಳ ಮಜಲುಗಳನ್ನು ಕಿರುತೆರೆಯ ವೀಕ್ಷಕರಿಗೆ ಮನಮುಟ್ಟುವಂತೆ ರೂಪಿಸಿದ್ದು ಶರಣಯ್ಯ ಅವರಿಗಿದ್ದ ಅಪಾರವಾದ ಕನ್ನಡದ ಸೊಗಡು ಕಾರಣ.

"ಅಸ್ಮಿತೆಯರೂಪ"

ಬಯಲಾಟ ಎಂಬ ಕಲಾಪ್ರಕಾರ ನಶಿಸಿ ಹೋಗುತ್ತಿದ್ದ ವೇಳೆ ಅದಕ್ಕೆ ಅಸ್ಮಿತೆಯ ರೂಪ ನೀಡಿ, ಬಹು ಶತಮಾನಗಳ ಅವಧಿಯವರೆಗೂ ಉಳಿಯುವಂತೆ ಮಾಡಿದ ಹೆಮ್ಮೆ ಇವರಲ್ಲಿದೆ. ಯಾರಿಗೂ ತಿಳಿಯದ ಈ ಬಯಲಾಟ ಕಲಾಪ್ರಕಾರಕ್ಕೆ ಜರ್ಮನಿಯಲ್ಲೂ ಆಕರ್ಷಣೆಗೆ ಕಾರಣವಾಗಿದ್ದು, ಈ ಬಯಲಾಟದ ಕಲಾಪ್ರಕಾರದ ವೈಶಿಷ್ಠö್ಯತೆ. ಇದನ್ನು ಗ್ರಹಿಸಿ ರಾಷ್ಟಿçÃಯ ಮಟ್ಟದಲ್ಲಿ ಮನ್ನಣೆ ಮತ್ತು ರಾಜ್ಯದ ಬಾಗಲಕೋಟೆ ಜಿಲ್ಲೆಯಲ್ಲಿ ಬಯಲಾಟ ಅಕಾಡೆಮಿ ಸ್ಥಾಪಿಸುವಂತೆ ಮಾಡಿದ್ದೂ ಸಹ ಈಗ ಇತಿಹಾಸ.

ಒಂದರಿAದ ಏಳರ ತರಗತಿಯವರೆಗೆ ಕವಿತಾಳ ಮತ್ತು ರಾಯಚೂರು ನಗರದ ಪೋಲಿಸ್ ಕಾಲೋನಿ, ಜವಾಹರ ನಗರ ಶಾಲೆಯಲ್ಲಿ ಪಾಠ, ೮ನೇ ತರಗತಿಯಿಂದ ಪದವಿಯವರೆಗೂ ಮೈಸೂರಿನಲ್ಲಿ ಅಧ್ಯಯನ, ಮಾನಸ ಗಂಗೋತ್ರಿಯಲ್ಲಿ ಸಿನಿಮಾದ ಕುರಿತು ತರಬೇತಿ, ನಂತರ ನಿರಂತರ ರಂಗಭೂಮಿಯಲ್ಲಿ ತನ್ಮಯತೆ ಈಗ ಜೀ ಕನ್ನಡ ಚಾನಲ್‌ನಲ್ಲಿ ನಾನ್ ಫಿಕ್ಷನ್‌ಗೆ ಮುಖ್ಯಸ್ಥರಾಗಿರುವುದು ರಾಯಚೂರು-ಕೊಪ್ಪಳದ ಕೀರ್ತಿಯನ್ನು ಬೆಂಗಳೂರಿಗೆ ತಂದು ಮುಟ್ಟಿಸಿದ್ದಾರೆ.

ತಾಯಿಯ ಮನೆಯಲ್ಲಿದ್ದ ಕಲಾಪ್ರಕಾರ ವಾದ್ಯಗಳ ಮೇಲಿನ ಆಸಕ್ತಿ, ನಾಟಕ, ರಂಗಭೂಮಿ ಕಿರುತೆರೆಗೆ ಬಂದು ತಲುಪಿದ್ದು, ಜೀ ಕನ್ನಡದ ಚಾನಲ್ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರ ಅವರ ಸಹಕಾರ ಮತ್ತು ಶರಣಯ್ಯ ಅವರಲ್ಲಿನ ಸೃಜನಾಶೀಲತೆ, ಸಂವೇದನಾಶೀಲತೆಯನ್ನು ಗುರುತಿಸಿದ್ದರ ಪರಿಣಾಮ ಈ ಸಾಧನೆಗೆ ಕಾರಣವಾಗಿದೆ. ಎಲೆಮರೆಯ ಕಾಯಿಯಂತೆ ಸೇವೆಗೈಯ್ಯುತ್ತಿದ್ದ ಸಾಲು ಮರದ ತಿಮ್ಮಕ್ಕ, ಕೃಪಾಕರ ಸೇನಾನಿ, ಇಬ್ರಾಹಿಂ ಸುತಾರ, ದೀಪಾ ಅಂಗಡಿ ರಂತಹ ಸಾಧಕರನ್ನು ಪರಿಚಯಿಸಿದ ಕೀರ್ತಿ ಇವರಿಗಿದೆ. ಕನ್ನಡ ಚಾನಲ್‌ಗಳಾದ ಸುವರ್ಣಾ, ಈಟಿವಿ ಕನ್ನಡ, ಜೀ ಕನ್ನಡದಲ್ಲಿ ಸ್ಥಳೀಯ ಸೊಗಡನ್ನು ಮನಮುಟ್ಟುವಂತೆ ರೂಪಿಸಿ ಪ್ರದರ್ಶಿಸುವ ಮೂಲಕ ಸ್ಥಳೀಯ ಸೊಗಡಿನ ಅಸ್ಮಿತೆಗೆ ವ್ಯಾಖ್ಯಾನ ನೀಡಿದ ಶರಣಯ್ಯ ಅವರ ಅಪಾರ ಆಸಕ್ತಿಗೆ ಮತ್ತಷ್ಟು ಖ್ಯಾತಿ ಬರಲಿ ಎನ್ನುವುದು ಒಂದುಕಡೆಯಾದರೆ, ರಾಯಚೂರಿನ ಹುಡುಗ ಈಗ ಚಾನಲ್‌ವೊಂದರ ಮುಖ್ಯಸ್ಥನಾಗಿರುವುದು ಜಿಲ್ಲೆಯೇ ಹೆಮ್ಮೆಪಡುವ ವಿಚಾರವಾಗಿದೆ.

8 views0 comments

Recent Posts

See All

ಬೆಂಗಳೂರು: ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರ ನಾಮನಿರ್ದೇಶಿತ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ಸು ಪಡೆದಿದೆ. ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು ಇರುವ ನಿಗಮ/ಮಂಡಳಿ/ಪ್ರಾಧಿಕಾರದ ಒಟ್ಟು 52 ಮಂದಿಯನ್ನು ಹಿಂಪಡೆದಿರುವುದಾಗಿ ಮುಖ್

bottom of page