• ಹೈದ್ರಾಬಾದ್ ಕರ್ನಾಟಕ ಡೆಸ್ಕ್

ಅಂಬೇಡ್ಕರ್ ರವರ ಹೋರಾಟದ ರಥವನ್ನು ಮುನ್ನಡೆಸಬೇಕಾಗಿದೆ -ಹನುಮಂತ ಮನ್ನಾಪೂರಿ

ರಾಯಚೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಪ್ರಸ್ತುತ ದಿನಮಾನಗಳಲ್ಲಿ, ಪ್ರತಿಯೊಂದು ಮನೆ ಮತ್ತು ಮನಗಳಿಗೆ ತಿಳಿಸುವಂತಹ ಕಾರ್ಯಕ್ರಮ ರೂಪಿಸಿರುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಹನುಮಂತ ಮನ್ನಾಪೂರಿ ಹೇಳಿದರು.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ದೊಂಡಂಬಳಿ ಗ್ರಾಮದಲ್ಲಿ ಶನಿವಾರ ಬಹುಜನ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ 'ಮನೆ-ಮನೆಗೆ ಅಂಬೇಡ್ಕರ್' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ದೇಶದಲ್ಲಿ ಸಂವಿಧಾನ ಜಾರಿಯಾಗುವ ಮುಂಚೆ ಶೋಷಿತರ ಬದುಕು ಅತ್ಯಂತ ಶೋಚನೀಯವಾಗಿತ್ತು. ಸಾವಿರಾರು ವರ್ಷಗಳ ಕಾಲ ಅಂಧಕಾರದಲ್ಲಿ ಮುಳುಗಿದ್ದ ಬಹುಜನರಿಗೆ, ಬಾಬಾ ಸಾಹೇಬರು ನಿರಂತರ ಹೋರಾಟ ಮಾಡಿ ಹಕ್ಕು- ಅಧಿಕಾರಗಳನ್ನು ದೊರಕಿಸಿಕೊಟ್ಟಿದ್ದಾರೆ. ಇನ್ನೂ ಮುಂದೆ ಹೋರಾಟದ ವಿಮೋಚನ ರಥವನ್ನು ಬಹುಜನರು ಮುನ್ನೆಡಸಬೇಕಾಗಿದೆ ಎಂದರು.


ನಂತರ ಶಿಕ್ಷಕ ರವಿಕುಮಾರ್ ಮಾತನಾಡಿ, ಶೋಷಿತರ ಪರ ಹೋರಾಡಿದ ಪೂರ್ವಿಕರ ಇತಿಹಾಸವನ್ನು ಜನರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಅತ್ಯಂತ ಕಷ್ಟದಲ್ಲಿಯೇ ಅತ್ಯುನ್ನತ ಶಿಕ್ಷಣವನ್ನು ಪಡೆದು ಇಡೀ ದೇಶಕ್ಕೆ ಬೃಹತ್ತಾದ ಸಂವಿಧಾನ ರಚಿಸಿದ್ದಾರೆ. ಹಾಗಾಗಿ ಯಾರೊಬ್ಬರೂ ಕೂಡ ಬಡತನ ಮತ್ತು ಆರ್ಥಿಕ ಸಂಕಷ್ಟ ಇದೆ ಎಂದು ಭಾವಿಸಿ ಮಕ್ಕಳಿಗೆ ಶಿಕ್ಷಣ ನೀಡದೆ ವಂಚಿಸಬೇಡಿ ಎಂದು ಪಾಲಕರನ್ನುದ್ದೇಶಿಸಿ ಮಾತನಾಡಿದರು.


ಪ್ರಸ್ತಾವಿಕವಾಗಿ ಜೆ.ಶರಣಪ್ಪ ಬಲ್ಲಟಗಿ ಮಾತನಾಡಿ, ಬಾಬಾ ಸಾಹೇಬರ ಹೋರಾಟ ಮತ್ತು ಸಂವಿಧಾನದ ಆಶಯಗಳನ್ನು ನೈಜವಾಗಿ ಅರಿತುಕೊಂಡಾಗ ಮಾತ್ರ ನಮಗೆ ವಿದ್ಯೆ-ಉದ್ಯೋಗ, ಆಸ್ತಿ ಮತ್ತು ರಾಜಕೀಯ ಅಧಿಕಾರ ಪಡೆಯಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಇಂದಿನ ಯುವ ಜನತೆ ಒಗ್ಗೂಡಿ ಹೋರಾಟ ಮಾಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಕಲಾ ಮಂಡಳಿ ಅಧ್ಯಕ್ಷ ರಾಜಪ್ಪ ಬಾಗೂರು, ಪತ್ರಕರ್ತ ಹೊನ್ನಪ್ಪ ಶಾಖಾಪೂರ, ರಮೇಶ ಬಲ್ಲಟಗಿ, ಬಿ.ಎಸ್.ಎಸ್. ಸಂಘಟನೆ ಮುಖಂಡ ಶಿವರಾಜ ಮರಾಟ, ಮೇಷಕ್ ಸಿರವಾರ, ಎಮ್.ಆರ್.ಹೆಚ್.ಎಸ್ ಮುಖಂಡ ದೇವೆಂದ್ರಪ್ಪ ಉಕ್ಕಿನಾಳ, ಎಸ್.ಡಿ.ಎಮ್.ಸಿ ಅಧ್ಯಕ್ಷ ನಿಂಗಪ್ಪ ಪರ್ತಾಪೂರ, ವಾಲ್ಮಿಕಿ ಸಂಘಟನೆ ಮುಖಂಡರಾದ ಲಿಂಗಪ್ಪ ನಾಯಕ, ವೆಂಕೋಬ ನಾಯಕ, ಡಿ.ಎಸ್.ಎಸ್. ಮುಖಂಡ ಶಿವಪ್ಪ ಚಲುವಾದಿ ಸೇರಿದಂತೆ ಗ್ರಾಮಸ್ಥರು, ಮಕ್ಕಳು ಭಾಗವಹಿಸಿದ್ದರು.

0 views0 comments

Recent Posts

See All

ಬೆಂಗಳೂರು: ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರ ನಾಮನಿರ್ದೇಶಿತ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ಸು ಪಡೆದಿದೆ. ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು ಇರುವ ನಿಗಮ/ಮಂಡಳಿ/ಪ್ರಾಧಿಕಾರದ ಒಟ್ಟು 52 ಮಂದಿಯನ್ನು ಹಿಂಪಡೆದಿರುವುದಾಗಿ ಮುಖ್